ಸಮಾಜದಲ್ಲಿ ಎಲ್ಲ ಜನರೂ ಬಡವ, ಬಲ್ಲಿದ ವ್ಯತ್ಯಾಸ ಇಲ್ಲದೆ ಬದುಕುವಂತಾಗಬೇಕು. ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನತೆ ಇರಬೇಕು ಎಂದು ಪರಿಭಾವಿಸಿದ ಯುವಜನರು ಜನಪ್ರತಿನಿಧಿಗಳಲ್ಲಿ ನಂಬಿಕೆ ಕಳೆದುಕೊಂಡು, ಹೋರಾಟದ ದಾರಿಯನ್ನು ಆಯ್ದುಕೊಳ್ಳುವ ಮೂಲಕ ನಕ್ಸಲೈಟ್‌ಗಳಾಗಿದ್ದಾರೆ. ಇದೀಗ ಆರು ಮಂದಿ ನಕ್ಸಲರು ಶರಣಾಗತಿಯಾಗುವ ಮೂಲಕ ಮುಖ್ಯವಾಹಿನಿಗೆ ಸೇರಿದ್ದಾರೆ. ಸರ್ಕಾರ ಇವರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು.
ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಆರೂ ಜನರು, ಶಿಕ್ಷೆ ಅನುಭವಿಸಿ ಹಿಂದಿರುಗಿದ ನಂತರ ಭ್ರಮನಿರಸನಕ್ಕೊಳಗಾಗದಂತೆ ಎಚ್ಚರವಹಿಸಬೇಕು. ಅವರಿಗೆ ಪುನರ್ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಇಲ್ಲದಿದ್ದರೆ, ಅವರಿಂದ ಸ್ಛೂರ್ತಿಗೊಂಡಿರಬಹುದಾದ ಯುವಜನರು ನಕ್ಸಲಿಸಂ ಹಾದಿ ತುಳಿಯಬಹುದು. ಹಾಗಾಗಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅತ್ಯಂತ ಸೂಕ್ಷ ವಾಗಿ ಹೆಜ್ಜೆ ಇಡಬೇಕು.
-ಎಸ್.ಚಂದ್ರಚೂಡ, ಸರಸ್ವತಿಪುರಂ, ಮೈಸೂರು





