ಮೈಸೂರಿನ ಕೆಆರ್.ಎಸ್ ರಸ್ತೆಯಲ್ಲಿರುವ ಆಕಾಶವಾಣಿ ಕೇಂದ್ರದ ಮುಖ್ಯ ದ್ವಾರದ ಮುಂಭಾಗ ಹಾಗೂ ಚಲುವಾಂಬ ಪಾರ್ಕ್‌ಗೆ ಹೊಂದಿಕೊಂಡಂತೆ ಇರುವ ಮೀನು ಮಾರಾಟ ಕೇಂದ್ರದಿಂದಾಗಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ.
ಈ ಮೀನು ಮಾರಾಟ ಕೇಂದ್ರದ ಹಿಂಭಾ ಗವೇ ಚಲುವಾಂಬ ಪಾರ್ಕ್ ಇದೆ. ಅಲ್ಲದೆ ಆಕಾಶವಾಣಿ ಕೇಂದ್ರದ ವಾತಾವರಣವೂ ಸುಂದರವಾಗಿದೆ. ಹೀಗಾಗಿಯೇ ಸಂಜೆಯಾಗುತ್ತಲೇ ಇಲ್ಲಿ ಹಿರಿಯ ನಾಗರಿಕರು, ಮಹಿಳೆಯರು ವಾಕಿಂಗ್ ಮಾಡುತ್ತಾರೆ. ಆದರೆ, ಈ ಮೀನು ಕೇಂದ್ರದ ತ್ಯಾಜ್ಯವನ್ನು ಬೀದಿನಾಯಿಗಳು ಪಾರ್ಕ್ ಹಾಗೂ ಆಕಾಶವಾಣಿ ಸಮೀಪ ಬೀಸಾಡುತ್ತಿದ್ದು, ಅನೈರ್ಮಲ್ಯದ ವಾತಾವರಣ ನಿರ್ಮಾಣ ವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಮೈಸೂರು ಮಹಾನಗರ ಪಾಲಿಕೆಯವರು ಪಾದಚಾರಿ ಮಾರ್ಗದಮೇಲೆಯೇ ಮೀನು ಮಾರಾಟ ಕೇಂದ್ರಕ್ಕೆ ಅನುಮತಿ ನೀಡಿರುವುದು ಸರಿಯಲ್ಲ, ಕುವೆಂಪುನಗರದ ಕಾಂಪ್ಲೆಕ್ಸ್ ಬಳಿಯು ಇದೇ ಸಮಸ್ಯೆ ಎದುರಾಗಿದೆ. ಆದ್ದರಿಂದ ಮಹಾನಗರ ಪಾಲಿಕೆ ಈ ಬಗ್ಗೆ ಗಮನಹರಿಸಿ ಪಾರ್ಕ್‌ಗಳ ಸಮೀಪವಿರುವ ಮೀನು ಮಾರಾಟ ಕೇಂದ್ರಗಳನ್ನು ಸ್ಥಳಾಂತರಿಸಬೇಕು.
-ಬೂತನಕೆರೆ ವಿಜೇಂದ್ರ, ಮೈಸೂರು,





