Mysore
25
haze

Social Media

ಶನಿವಾರ, 04 ಏಪ್ರಿಲ 2026
Light
Dark

ಓದುಗರ ಪತ್ರ | ಶಾಸನಸಭೆಗಳಲ್ಲಿ ಹೊಸ ಯೋಜನೆಗಳ ಚರ್ಚೆಯಾಗಲಿ

ಓದುಗರ ಪತ್ರ

ಕರ್ನಾಟಕ ವಿಧಾನಸಭೆ ಹಾಗೂ ಸಂಸತ್‌ ಮೇಲನೆ ಹಾಗೂ ಕೆಳಮನೆಗಳಲ್ಲಿ 2026ರ (ಬಜೆಟ್ ಮೇಲಿನ ಚರ್ಚೆ) ಮುಂದುವರಿದ ಅಧಿವೇಶನಗಳು ನಡೆಯುತ್ತಿವೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಮುಂದೆ ಏನು ಯೋಜನೆಗಳು ಜಾರಿಯಾಗಬೇಕು.ಯಾವ ಯೋಜನೆಗಳು ಬಿಟ್ಟು ಹೋಗಿವೆ, ಏನು ಲೋಪಗಳಿವೆ ಎಂಬ ಬಗ್ಗೆ ಚರ್ಚೆಯಾಗಬೇಕು. ಆದರೆ ಇತ್ತ ಕರ್ನಾಟಕದ ವಿಧಾನ ಸಭೆ ಬಜೆಟ್‌ ಅಧಿವೇಶನದಲ್ಲಿ ಆಡಳಿತ ಪಕ್ಷದ ಸದಸ್ಯರು ತಮ್ಮ ಮುಖ್ಯ ಮಂತ್ರಿ ಮಂಡಿಸಿದ ದಾಖಲೆ 17ನೇ ಬಜೆಟ್ ಎಂದು ಬಜೆಟ್‌ನಲ್ಲಿ ಇರುವ ವಿಷಯಗಳನ್ನು ಹೊಗಳುವುದು ನಡೆದರೆ ಅತ್ತ ಲೋಕಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಕೇವಲ ಪ್ರಧಾನಿಯವರನ್ನು ಹೊಗಳುವುದು, ಈಗಾಗಲೇ ಆಗಿರುವ ಯೋಜನೆಗಳನ್ನು ಉಲ್ಲೇಖಿಸಿ ಪ್ರಸ್ತಾಪ ಮಾಡುವುದರಲ್ಲೇ ಕಾಲಹರಣಮಾಡುತ್ತಿದ್ದಾರೆ. ಇದು ತಪ್ಪಬೇಕು. ಬಜೆಟ್‌ನಲ್ಲಿ ಆಗಬೇಕಿರುವ ಯೋಜನೆಗಳು, ಅವುಗಳ ಅನುಷ್ಠಾನದ ಬಗ್ಗೆ ಚರ್ಚೆಯಾಗಬೇಕು.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.

Tags:
error: Content is protected !!