Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ| ಸದನದಲ್ಲಿ ಜ್ವಲಂತ ಸಮಸ್ಯೆಗಳ ಚರ್ಚೆಯಾಗಲಿ

ಜುಲೈ 15ರಂದು ಆರಂಭಗೊಂಡಿರುವ ರಾಜ್ಯ ವಿಧಾನಮಂಡಲ ಅಧಿವೇಶನ ಜು.26ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿದೆ.

ಇತ್ತೀಚಿನ ದಿನಗಳಲ್ಲಿ ವಿಧಾನ ಮಂಡಲ ಅಧಿವೇಶನಗಳಲ್ಲಿ ಕೇವಲ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ
ಜಟಾಪಟಿಯೇ ಹೆಚ್ಚಾಗಿರುತ್ತದೆ. ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಾರೆ. ಸದನದಲ್ಲಿ ಗದ್ದಲವೇ ಹೆಚ್ಚಾಗಿರುವುದಲ್ಲದೇ ಪ್ರತಿಪಕಗಳು ಸಭಾತ್ಯಾಗ ಮಾಡಿಕೊಂಡು ಸದನದ ಸಮಯ ಹಾಳು ಮಾಡುತ್ತವೆ. ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿಯೂ ಹೀಗಾಗುವುದು ಬೇಡ. ಸದನದ ಹೆಚ್ಚಿನ ಸಮಯವನ್ನು ಸಾರ್ವಜನಿಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ಮೀಸಲಿಡಬೇಕಿದೆ. ಎಲ್ಲ ವಿಚಾರಗಳಿಗೂ ಏರುದ್ಧನಿಯಲ್ಲಿ ಕಿರುಚಾಡುತ್ತಾ ಜಗಳವಾಡುವುದು, ಪರಸ್ಪರ ನಿಂದನೆ ಮಾಡುವುದನ್ನು ಬಿಟ್ಟು, ಆಡಳಿತ ಪಕವು ತನ್ನ ಮುಂದಿನ ಯೋಜನೆಗಳ ಬಗ್ಗೆ ತಿಳಿಸುವ ಹಾಗೂ ವಿಪಕಗಳು ಸರ್ಕಾರದ ತಪ್ಪುಗಳನ್ನು ತಿದ್ದುವ ಪ್ರಯತ ಮಾಡಬೇಕು. ಆ ಮೂಲಕ ಸದನದಲ್ಲಿ ಆರೋಗ್ಯಕರ ಚರ್ಚೆಯಾಗಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags: