ಅವರ ಆತ್ಮಸ್ಥೈರ್ಯವನ್ನು ಕಂಡು ‘ಹೆಂಡತಿ ಎಂದರೆ ಹೀಗಿರಬೇಕು’ ಅಂದುಕೊಂಡೆ. . . ಇಲ್ಲಿ ಪ್ರಸ್ತಾಪಿಸುತ್ತಿರುವುದು ಇತ್ತೀಚೆಗಷ್ಟೆ ಕ್ಯಾನ್ಸರ್ ವಿರುದ್ಧ ಹೋರಾಡಿ ವಿಜಯಿಯಾಗಿ ತಾಯ್ನಾಡಿಗೆ ಮರಳಿದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ – ಗೀತಾ ಶಿವರಾಜ್‌ಕುಮಾರ್ ಜೋಡಿಯ ಬಗ್ಗೆ.
ಶಿವಣ್ಣ ಅವರನ್ನು ಕಾಪಾಡಿಕೊಂಡು ಬಂದಿರುವ ಗೀತಾ ಶಿವರಾಜ್‌ಕುಮಾರ್ ಪತಿಗೆ ಕ್ಯಾನ್ಸರ್ ಇದೆ ಎಂದು ತಿಳಿದಾಗ, ಬೇರೆ ಹೆಣ್ಣು ಮಕ್ಕಳಂತೆ ಕುಗ್ಗಿಹೋಗಲಿಲ್ಲ. ಬದಲಿಗೆ ಪತಿಯಲ್ಲಿ ಆತ್ಮವಿಶ್ವಾಸ ತುಂಬುತ್ತಾ ಅಮೆರಿಕಗೆ ಕರೆದುಕೊಂಡು ಹೋಗಿ, ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಸದ್ಯ ಶಿವಣ್ಣ ಅವರ ಆರೋಗ್ಯ ಸುಧಾರಿಸಿದ್ದು, ಕರುನಾಡಿಗೆ ವಾಪಸ್ ಕರೆತಂದಿದ್ದಾರೆ. ಈ ಮೂಲಕ ಗೀತಾ ಶಿವರಾಜ್‌ಕುಮಾರ್ ಮಾದರಿಯಾಗಿದ್ದಾರೆ. -ಕೆ. ವಿ. ವಾಸು, ವಿವೇಕಾನಂದ ನಗರ, ಮೈಸೂರು.





