ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ನಡೆಸುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಿಂದ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲ ಹಾಗೂ ಎಲ್‌ಪಿಜಿ ಅನಿಲ ಸಾಗಣೆ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಆಟೋಗಳಿಗೆ ಸಿಎನ್‌ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆ ಮಾಡುವ ಬಂಕ್‌ಗಳು ಬಂದ್ ಆಗಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ.
ಆಟೋಗಳಿಗೆ ಸಿಎನ್‌ಐ ಹಾಗೂ ಎಲ್‌ಪಿಜಿ ಇಂಧನ ಪೂರೈಸುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಪೂರೈಕೆಯಲ್ಲಿ ವ್ಯತ್ಯಯ ವಾಗಿರುವುದನ್ನು ದೃಶ್ಯ ಮಾಧ್ಯಮಗಳು ನಿರಂತರವಾಗಿ ಪ್ರಚಾರ ಮಾಡುವ ಮೂಲಕ ಆಟೋಚಾಲಕರಲ್ಲಿ ಆತಂಕ ಮೂಡಿಸುತ್ತಿವೆ. ತಾವು ಕೆಲವು ವಿದ್ಯುನ್ಮಾನ ಮಾಧ್ಯಮಗಳ ಪ್ರಚೋದನೆಗೆ ಒಳಗಾಗಬೇಡಿ ಪೇಟ್ರೋಲ್, ಡೀಸೆಲ್, ಗ್ಯಾಸ್, ವಿದೇಶದಿಂದ ಬರೋದು ಇವೆಲ್ಲದರ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದಾಗಿದೆ. ಕೇಂದ್ರ ಸರ್ಕಾರ ಸಿಎನ್‌ಜಿ ಹಾಗೂ ಎಲ್‌ಪಿಜಿ ಇಂಧನವನ್ನೇ ನಂಬಿ ಜೀವನ ನಡೆಸುತ್ತಿರುವ ಆಟೋಚಾಲಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಕೂಡಲೇ ಆಟೋಗಳಿಗೆ ಸಿಎನ್‌ಜಿ ಹಾಗೂ ಎಲ್‌ಪಿಜಿ ಇಂಧನವನ್ನು ಸಕಾಲಕ್ಕೆ ಪೂರೈಸುವ ಮೂಲಕ ಆಟೋ ಚಾಲಕರ ಹಿತ ಕಾಪಾಡುವುದು ಅಗತ್ಯ. -ಪಿ. ರಾಜು, ಅಶೋಕಪುರಂ, ಮೈಸೂರು





