ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಈಗ ವಿಶ್ವದ ಗಮನ ಸೆಳೆದಿದೆ. ಅಧ್ಯಕೀಯ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದು, ಈ ಚುನಾವಣೆ ಕುತೂಹಲ ಕೆರಳಿಸಿದೆ.
78 ವರ್ಷ ಪ್ರಾಯದ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಅವರ ಕಿವಿಯ ಭಾಗಕ್ಕೆ ಗಾಯವಾಗಿದೆ. ಅಮೆರಿಕಾದಂತಹ ಬಲಿಷ್ಠ ರಾಷ್ಟ್ರದಲ್ಲಿಯೇ ಭದ್ರತಾ ಲೋಪವಾಗಿರುವುದು ನಿಜಕ್ಕೂ ಆಶ್ಚರ್ಯಕರ, 20 ವರ್ಷದ ಕೂಕ್ ಎಂಬಾತನಿಂದ ಈ ದಾಳಿ ನಡೆದಿದ್ದು, ದಾಳಿಗೆ ನಿಖರವಾದ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬೀಳಬೇಕಿದೆ. ಅಮೆರಿಕಾದಲ್ಲಿ ಇಂತಹ ದಾಳಿ ಇದೇ ಮೊದಲೇನಿಲ್ಲವಾದರೂ ಈ ಘಟನೆಯಿಂದಾಗಿ ಇತರೆ ದೇಶಗಳ ನಾಯಕರು ದಿಗ್ಭ್ರಮೆಗೊಂಡಿದ್ದಾರೆ.
-ದೇವರಹಳ್ಳಿ ಲೋಕೇಶ್, ಪಾಂಡವಪುರ.





