Mysore
28
light rain

Social Media

ಶನಿವಾರ, 21 ಫೆಬ್ರವರಿ 2026
Light
Dark

ಓದುಗರ ಪತ್ರ | ರಸ್ತೆಯ ಹೆಸರು ಬದಲಾವಣೆ ಬೇಡ

ಮೈಸೂರಿನ ಕೆಆರ್‌ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು ಇಡಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಒತ್ತಾಯಿಸಿ, ಮೈಸೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆದರೆ, ಈ ರಸ್ತೆಗೆ ಈಗಾಗಲೇ ‘ಪ್ರಿನ್ಸೆಸ್ ರಸ್ತೆ’ ಎಂಬ ಹೆಸರಿದೆ. ರಾಜಕೀಯ ಕಾರಣಕ್ಕಾಗಿ ಈಗ ಆ ರಸ್ತೆಯ ಹೆಸರು ಬದಲಾವಣೆ ಮಾಡುವುದು ಎಷ್ಟು ಸರಿ? ಹಿಂದೆಲ್ಲಾ ಸಾಧಕ ವ್ಯಕ್ತಿಗಳು ಸಾವನ್ನಪ್ಪಿದ ಬಳಿಕ ಅವರ ಸ್ಮರಣಾರ್ಥವಾಗಿ ಅವರ ಹೆಸರುಗಳನ್ನು ರಸ್ತೆಗಳಿಗೆ, ಉದ್ಯಾನವನಗಳಿಗೆ ಹಾಗೂ ವೃತ್ತಗಳಿಗೆ ಇಡಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬದುಕಿರುವ ವ್ಯಕ್ತಿಗಳ ಹೆಸರುಗಳನ್ನು ರಸ್ತೆಗಳಿಗೆ ಇಡುವ ಪರಿಪಾಠ ಶುರುವಾಗಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅದರ ಬಗ್ಗೆ ಎರಡು ಮಾತಿಲ್ಲ. ಅವರ ಆಡಳಿತಾವಽಯಲ್ಲಿ ಮೈಸೂರಿನಲ್ಲಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳೂ ಸ್ಥಾಪನೆಯಾಗಿವೆ. ರೈತರ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದಾರೆ. ಅದನ್ನು ಸ್ಮರಿಸಬೇಕು. ಆದರೆ, ಅದಕ್ಕಾಗಿ ರಸ್ತೆಯೊಂದಕ್ಕೆ ಈಗಿರುವ ಹೆಸರನ್ನು ತೆಗೆದು ಅವರ ಹೆಸರನ್ನು ಮರನಾಮಕರಣ ಮಾಡುವುದು ಅಷ್ಟೇನೂ ಸರಿ ಕಾಣದು.

-ಕೆ.ವಿ.ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.

 

Tags:
error: Content is protected !!