Mysore
36
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಓದುಗರ ಪತ್ರ | ಜನಗಣತಿ ದೇಶದ ಏಳಿಗೆಯ ದಿಕ್ಸೂಚಿ

dgp murder case

ಜನಗಣತಿ ಕಾರ್ಯದಲ್ಲಿ ಗಣತಿದಾರರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು. ಗುರುತಿನ ಚೀಟಿ ಧರಿಸಿ, ಸೌಜನ್ಯದಿಂದ ಮಾಹಿತಿ ಸಂಗ್ರಹಿಸಿ. ಮನೆ ಬಾಗಿಲು ಮುಚ್ಚಿದ್ದರೆ ಮರು ಭೇಟಿ ನೀಡಿ ಮಾಹಿತಿ ಪಡೆಯುವುದು ನಿಮ್ಮ ಬದ್ಧತೆಯಾಗಿರಲಿ. ಊಹೆಗಳಿಗೆ ಅವಕಾಶ ನೀಡದೆ ವಾಸ್ತವವನ್ನೇ ಆಪ್‌ನಲ್ಲಿ ದಾಖಲಿಸಿ ಹಾಗೂ ಜನರ ಖಾಸಗಿ ಮಾಹಿತಿಯ ಗೌಪ್ಯತೆ ಕಾಪಾಡಿ.

ಆನ್‌ಲೈನ್‌ನಲ್ಲಿ ಮಾಹಿತಿ ನೀಡಿದವರಿಂದ ರೆಫರೆನ್ಸ್ ಸಂಖ್ಯೆ ಪಡೆದು ಕೆಲಸ ಸುಲಭವಾಗಿಸಿಕೊಳ್ಳಿ. ನಾಗರಿಕರು ನಿಖರ ಮಾಹಿತಿ ನೀಡಿ ಈ ರಾಷ್ಟ್ರೀಯ ಅಭಿಯಾನವನ್ನು ಯಶಸ್ವಿ ಗೊಳಿಸುವುದು ಅಗತ್ಯವಾಗಿದೆ. ಸಾರ್ವಜನಿಕರು ಏಪ್ರಿಲ್ ೧೫ರ ವರೆಗೆ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶವಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು. ತದನಂತರ ಏಪ್ರಿಲ್ ೧೬ರಿಂದ ಒಂದು ತಿಂಗಳ ಕಾಲ ಮೊದಲ ಹಂತವಾಗಿ ಮನೆಪಟ್ಟಿ ಹಾಗೂ ಮನೆಗಣತಿ ಕಾರ್ಯ ನಡೆಯಲಿದ್ದು, ಪ್ರತಿಯೊಬ್ಬರೂ ಗಣತಿದಾರರಿಗೆ ಸಹಕರಿಸಬೇಕು. ಈ ಬಗ್ಗೆ ಕಾಲರ್ ಟ್ಯೂನ್ ಹಾಗೂ ಸ್ವಚ್ಛತಾ ವಾಹನಗಳ ಮೂಲಕ ಜಾಗೃತಿ ಮೂಡಿಸುವುದು ಅಭಿಯಾನಕ್ಕೆ ಸಹಕಾರಿಯಾಗಿದೆ. ಮುಖ್ಯವಾಗಿ, ಗಣತಿಯಿಂದ ಸರ್ಕಾರಿ ಸೌಲಭ್ಯಗಳು ಅಥವಾ ರೇಷನ್ ಕಾರ್ಡ್ ರದ್ದಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಬೇಡ. ನಿಮ್ಮ ಮಾಹಿತಿಯು ದೇಶದ ಭವಿಷ್ಯದಯೋಜನೆಗಳಿಗೆ ಮಾತ್ರ ಬಳಕೆಯಾಗಲಿದ್ದು, ಎಲ್ಲರೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳೋಣ. –ಬಿ. ಗಣೇಶ, ಕೆ. ಜಿ. ಕೊಪ್ಪಲು,

Tags:
error: Content is protected !!