Mysore
30
broken clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಓದುಗರ ಪತ್ರ | ಭಯೋತ್ಪಾದಕರನ್ನು ಎದುರಿಸಿದ ಧೀರ ಹುಸೇನ್ ಶಾ

ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಅನಂತ ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿರುವುದು ಅಮಾನವೀಯ ಇದು ಅತ್ಯಂತ ಹೇಯ ಪ್ರಕರಣವಾಗಿದ್ದು, ದಾಳಿ ವೇಳೆ ಪ್ರವಾಸಿಗರನ್ನು ರಕ್ಷಣೆ ಮಾಡಲು ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ಹುತಾತ್ಮರಾದ ವ್ಯಕ್ತಿಯ ಬಗ್ಗೆಯೂ ಈ ನಾಡು ಮಾತನಾಡಬೇಕಿದೆ.

ಆತನ ಹೆಸರು ಸೈಯದ್ ಆದಿಲ್ ಹುಸೇನ್ ಶಾ. ಭಯೋತ್ಪಾದಕರಿಗೆ ಪ್ರತಿರೋಧ ತೋರಿಸಿದ್ದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ತನಗೆ ಸಂಬಂಧವೇ ಇಲ್ಲದ, ಕೇವಲ ಪ್ರವಾಸಕ್ಕಾಗಿ ಬಂದಿದ್ದವರನ್ನು ಕುದುರೆಯ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ಶಾ, ಭಯೋತ್ಪಾದಕರು ದಾಳಿ ಮಾಡುತ್ತಿದ್ದಂತೆ ಅಲ್ಲಿಂದ ಕಾಲುಕೀಳಬಹುದಿತ್ತು. ಅಥವಾ ಸುಮ್ಮನೇ ಇದ್ದರೂ ಉಗ್ರರು ಆತನನ್ನು ಕೊಲ್ಲುತ್ತಲೂ ಇರಲಿಲ್ಲ.

ಆದರೆ ಆತ, ಪ್ರವಾಸಿಗರನ್ನು ಕರೆದೊಯ್ಯುವುದು ಮಾತ್ರವಲ್ಲ, ಅವರ ರಕ್ಷಣೆ ಕೂಡ ತನ್ನ ಹೊಣೆ ಎಂದು ಭಾವಿಸಿದ್ದರು. ಹಾಗಾಗಿಯೇ ಗುಂಡು ಹಾರಿಸುತ್ತಿದ್ದ ಭಯೋತ್ಪಾದಕನಿಂದ ರೈಫಲ್‌ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿ, ಜೀವ ತ್ಯಾಗ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಪ್ರವಾಸಿಗರು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಶಾ ಅವರ ಧೈರ್ಯ, ಕರ್ತವ್ಯಪ್ರಜ್ಞೆ ಇಡೀ ದೇಶಕ್ಕೇ ಮಾದರಿಯಾಗಿದೆ.

-ಜಿ. ಶಿವರಾಜು, ಗಾಂಧಿನಗರ, ಮೈಸೂರು.

Tags:
error: Content is protected !!