Mysore
20
overcast clouds
Light
Dark

ಓದುಗರ ಪತ್ರ| ಪುನರಾರಂಭಗೊಳ್ಳುವುದೇ ಭದ್ರಾವತಿ ಕಾರ್ಖಾನೆ?

ಸರ್ ಎಂ.ವಿಶ್ವೇಶ್ವರಯ್ಯನವರು ಆರಂಭಿಸಿದ ಕರ್ನಾಟಕದ ಮೊದಲ ಕಾರ್ಖಾನೆ ಎಂದೇ ಕರೆಯಲ್ಪಡುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನ ಮತ್ತು ಉಕ್ಕು ಕಾರ್ಖಾನೆ ಸ್ಥಗಿತವಾಗಿ ಸಾವಿರಾರು ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುವಂತೆ ಮಾಡಿದೆ.

ಈ ಕಾರ್ಖಾನೆ ಸಾವಿರಾರು ಮಂದಿಗೆ ಉದ್ಯೋಗ ನೀಡಿತ್ತು. ಅನೇಕ ಕುಟುಂಬಗಳವರು ಈ ಕಾರ್ಖಾನೆಯ ಉದ್ಯೋಗವನ್ನೇ ಆಧರಿಸಿ ಜೀವನ ಸಾಗಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಈ ಕಾರ್ಖಾನೆಯನ್ನು ಮುಚ್ಚಲಾಗಿದ್ದು, ಇಲ್ಲಿನ ನೌಕರರ ಬದುಕು ಬೀದಿಗೆ ಬರುವಂತೆ ಮಾಡಿದೆ. ಪ್ರಸ್ತುತ ಕರ್ನಾಟಕದವರೇ ಆದ ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿದ್ದು, ಈ ಕಾರ್ಖಾನೆಯ ಪುನರಾರಂಭಕ್ಕೆ ಕ್ರಮವಹಿಸಬಹುದು ಎಂಬ ವಿಶ್ವಾಸ ಇಲ್ಲಿನ ಸಿಬ್ಬಂದಿಯಲ್ಲಿ ಮೂಡಿದೆ. ಒಂದು ವೇಳೆ ಕಾರ್ಖಾನೆ ಪುನರಾರಂಭಗೊಂಡಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕುವುದಲ್ಲದೇ ಉಕ್ಕಿನ ನಗರಿ ಎಂದೇ ಖ್ಯಾತಿ ಪಡೆದಿರುವ ಭದ್ರಾವತಿಯಲ್ಲಿ ವಾಣಿಜ್ಯ ಚಟುವಟಿಕೆಗಳೂ ಚುರುಕುಗೊಂಡು ಜನರು ಆರ್ಥಿಕವಾಗಿ ಸಬಲರಾಗಲಿದ್ದಾರೆ. ಆದ್ದರಿಂದ ಸಚಿವ ಕುಮಾರಸ್ವಾಮಿಯವರು ಈ ಕಾರ್ಖಾನೆಯ ಪುನರಾರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ.

-ಸಂಜಯ್, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು.