Mysore
34
few clouds

Social Media

ಮಂಗಳವಾರ, 18 ಮಾರ್ಚ್ 2025
Light
Dark

ಓದುಗರ ಪತ್ರ: ರಸ್ತೆ ದುರಸ್ತಿಪಡಿಸಿ

ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಿಂದ ಮೈಸೂರು-ಮಾನಂದವಾಡಿ ರಸ್ತೆ ಮೂಲಕ ಮೈಸೂರಿಗೆ ಸಂಚರಿಸುವವರು ಹಾಗೂ ಜಯಪುರ ಹೋಬಳಿಯ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜನರು ಕೆಂಚಲಗೂಡು ಗೇಟ್ ಮಾರ್ಗವಾಗಿ ಸಪ್ತ ಋಷಿ ನಗರ, ಮಾಲೆಗಾಲದ ಮಾರಮ್ಮನವರ ದೇವಸ್ಥಾನ, ವಿವೇಕಾನಂದ ನಗರದ ಮೂಲಕವೂ ಮೈಸೂರನ್ನು ತಲುಪುತ್ತಾರೆ.

ನಿತ್ಯ ನೂರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ವಾಹನದಟ್ಟಣೆ ಹೆಚ್ಚಾಗಿರುವ ಈ ರಸ್ತೆಯು ಕೆಂಚಲಗೂಡು ಗೇಟ್‌ನಿಂದ ವರ್ತುಲ ರಸ್ತೆಯವರೆಗೆ ಸುಮಾರು ಐದು ಕಿಲೋಮೀಟರ್‌ನಷ್ಟು ಉದ್ದವಿದ್ದು, ಈ ಪೈಕಿ ಸುಮಾರು ಒಂದೂವರೆ ಕಿಲೋಮೀಟರ್‌ನಷ್ಟು ರಸ್ತೆ ತೀರಾ ಹದಗೆಟ್ಟು ಹೋಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡು ಗುಂಡಿ ಕಾಣದೆ ಅನೇಕ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ.

ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಇಲಾಖೆಯ ಮೇಲಽಕಾರಿಗಳು ಗಮನಹರಿಸಿ ತುರ್ತಾಗಿ ಈ ರಸ್ತೆಯನ್ನು ದುರಸ್ತಿ ಮಾಡಬೇಕಿದೆ.

-ಕೆ.ಪಿ.ನಂಜುಂಡ ಸ್ವಾಮಿ, ಕೆಎಚ್‌ಬಿ ಬಡಾವಣೆ, ಕೆಂಚಲಗೂಡು.

 

Tags: