ಭಾರತೀಯ ಜನತಾ ಪಕ್ಷವು ಹಾಲು, ವಿದ್ಯುತ್ ಮತ್ತಿತರ ಜೀವನಾಶ್ವಕ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾ ಕ್ರೋಶ ಹೋರಾಟವನ್ನು ನಡೆಸುತ್ತಿದೆ.
ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನತೆಯ ಸಂಕಷ್ಟದ ಬಗೆಗೆ ಅವರ ಕಳಕಳಿ ಮತ್ತು ಅನುಕಂಪ ಶ್ಲಾಘನೀಯ. ಆದರೆ, ಇವರ ಈ ಹೋರಾಟದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ, ಡೀಸೆಲ್ ಬೆಲೆ ಏರಿಕೆ ಮತ್ತು ರಸ್ತೆ ಟೋಲ್ ಏರಿಕೆಯನ್ನು ಸೇರಿಸಿದ್ದರೆ ಅವರ ಹೋರಾಟ ಅರ್ಥ ಪೂರ್ಣ ವಾಗುತ್ತಿತ್ತು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಜನಸಾಮಾನ್ಯರ ಬೆಂಬಲ ದೊರಕುತ್ತಿತ್ತು. ಅಂತೆಯೇ ಈ ಹೋರಾಟವನ್ನು ಜನರು ಬೂಟಾಟಿಕೆ ಮತ್ತು ನಾಟಕ ಎಂದು ಕರೆಯುವಂತಾಗಿದೆ.
-ರಮಾನಂದ ಶರ್ಮಾ, ಬೆಂಗಳೂರು



