Mysore
37
scattered clouds

Social Media

ಶನಿವಾರ, 02 ಮೇ 2026
Light
Dark

ಓದುಗರ ಪತ್ರ ಹನಿಟ್ರ್ಯಾಪ್‌ ; ಕಠಿಣ ಕ್ರಮ ಅಗತ್ಯ

ಓದುಗರ ಪತ್ರ

ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದ ಕಲಾಪದಲ್ಲಿ ಜನಹಿತಕ್ಕೆ ಸಂಬಂಧಿಸಿದ ವಿಚಾರಗಳಿಗಿಂತಲೂ ಹೆಚ್ಚಾಗಿ ಹನಿಟ್ರ್ಯಾಪ್‌ನಂತಹ ವ್ಯಕ್ತಿ
ನೆಲೆಯ ವಿಷಯಗಳು ಹೆಚ್ಚು ಚರ್ಚೆಗೊಳಪಟ್ಟು ಧರಣಿ ಮತ್ತು ಗದ್ದಲ ಉಂಟು ಮಾಡಿತು.

ರಾಜ್ಯದ 48ಕ್ಕೂ ಹೆಚ್ಚು ಮಂದಿ ಶಾಸಕರು, ಗಣ್ಯರು ಮತ್ತು ಪ್ರಭಾವಿ ರಾಜಕಾರಣಿಗಳು ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದಾರೆ ಎಂದು ಸಹಕಾರ
ಸಚಿವರು ಹೇಳಿದ್ದು, ಕಲಾಪದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಹನಿಟ್ರ್ಯಾಪ್ ಜಾಲದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು ಸಿಲುಕಿ ಕೊಂಡಿರುವುದು ನಾಚಿಕೆಗೇಡಿನ ಸಂಗತಿ.

ಈ ಪ್ರಕರಣದಲ್ಲಿ ಕೆಲವು ಸಚಿವರ ಹೆಸರು ತಳುಕು ಹಾಕಿಕೊಂಡಿದೆ ಎನ್ನಲಾಗಿದ್ದು, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆ ಮೂಲಕ ದೇಶದಲ್ಲಿ ರಾಜ್ಯದ ಗೌರವವನ್ನು ಕಾಪಾಡುವ ಕೆಲಸವಾಗಬೇಕಿದೆ.

-ಲಾವಣ್ಯ, ಕಿತ್ತೂರು.

 

Tags:
error: Content is protected !!