ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು ಪ್ರತಿಯೊಬ್ಬ ಕನ್ನಡಿಗರೂ ಮೆಚ್ಚುವಂತದ್ದು.
೨೫ ಲಕ್ಷಕ್ಕೂ ಹೆಚ್ಚು ರೈತರು ದಿನವೂ ಲಕ್ಷಾಂತರ ಲೀಟರ್ ಹಾಲನ್ನು ನಂದಿನಿಗೆ ಒದಗಿಸುತ್ತಿದ್ದಾರೆ. ಇದರಿಂದ ಬರುವ ಹಣದಿಂದ, ರೈತರು ಮತ್ತು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಲು ನಂದಿನಿ ಪ್ರಮುಖ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮಧ್ಯವರ್ತಿಗಳ ಹಾವಳಿ ಇಲ್ಲದ ಕಾರಣ ಲಾಭದ ಬಹುಪಾಲು ರೈತರಿಗೆ ಸಿಗುತ್ತಿದೆ. ಇತ್ತೀಚೆಗಂತೂ ನಂದಿನಿಯು ಬಗೆ ಬಗೆಯ ರೀತಿಯ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿರುವುದು ಹೆಮ್ಮೆ ಮೂಡಿಸುತ್ತದೆ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





