Mysore
27
broken clouds
Light
Dark

ಕಾರಿನಂತೆ ಜೆಸಿಬಿಯನ್ನು ಅಲಂಕಾರ ಮಾಡಿ ವಧುವನ್ನು ಕರೆತಂದ ವರ: ವಿಡಿಯೋ ನೋಡಿ

ರಾಂಚಿ: ಸಾಮಾನ್ಯವಾಗಿ ಮದುವೆಯ ದಿಬ್ಬಣ ನೋಡಿದ್ದೇವೆ. ಅಲಂಕಾರ ಮಾಡಿದ ಕಾರಿನಲ್ಲಿ ಅಥವಾ ಕುದುರೆಯೇರಿ ಮದುವೆ ಮೆರವಣಿಗೆಯಲ್ಲಿ ವರ ಮಂಟಪಕ್ಕೆ  ಬರುತ್ತಾನೆ. ಆದರೆ ಇಲ್ಲೊಬ ವರ ವಿಭಿನ್ನವಾಗಿ ಮಂಟಪಕ್ಕೆ ಬಂದಿರುವುದು ಸುದ್ದಿಯಾಗಿದೆ.

ಜಾರ್ಖಂಡ್‌ ನ ರಾಂಚಿ ಮೂಲದ ರಾಜಾ ಕೃಷ್ಣ ಮಹತೋ ವಿವಾಹ ಇತ್ತೀಚೆಗೆ ನೆರವೇರಿದೆ. ವರ ರಾಜಾ ಕೃಷ್ಣ ಮಹತೋ ಮಂಟಪಕ್ಕೆ ಬಂದಿದ್ದಾರೆ. ಕಾರು ಅಥವಾ ಕುದುರೆಯಲ್ಲಿ ಬಂದಿಲ್ಲ. ಬದಲಾಗಿ ಜೆಸಿಬಿಯಲ್ಲಿ ಬಂದಿದ್ದಾರೆ.!

ವೃತ್ತಿಯಲ್ಲಿ ವಾಹನಗಳಿಗೆ ಹೂವು ಡೆಕೋರೇಟರ್ ಮಾಡುವ ಕಾಯಕವನ್ನು ಮಾಡುವ ರಾಜಾ ಕೃಷ್ಣ ಮಹತೋ ಅವರು ತನ್ನ ಮದುವೆಯ ಮೆರವಣಿಗೆ ಸಾಗಲು ಜೆಸಿಬಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾರಿನ ಹೊರ ಭಾಗದಲ್ಲಿ ಹೇಗೆ ಹೂವುಗಳನ್ನು ಅಲಂಕಾರ ಮಾಡುತ್ತಾರೋ ಹಾಗೆಯೇ ಜೆಸಿಬಿಗೆ ಹೂವಿನ ಅಲಂಕಾರವನ್ನು ಮಾಡಿ ವರನ ಉಡುಗೆ ತೊಟ್ಟು ಮಂಟಪಕ್ಕೆ ಬಂದಿದ್ದಾರೆ.

ಮದುವೆಯ ಬಳಿಕ ಪತ್ನಿಯನ್ನು ಅಲಂಕೃತ ಜೆಸಿಬಿಯಲ್ಲಿ ಕೂರಿಸಿಕೊಂಡು ಬಂದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ