ಮೌಲ್ಯಯುತ ರಫ್ತುಗಳನ್ನು ಹೆಚ್ಚಿಸಿ ನಮ್ಮ ವ್ಯಾಪಾರ ಕೊರತೆ ಕಡಿಮೆ ಮಾಡಿ ಉಳಿತಾಯದ ಹಂತಕ್ಕೆ ತರುವುದು ಯೋಜನೆಯ ಗುರಿ!

ಮೇಕ್ ಇನ್ ಇಂಡಿಯಾ ಆರಂಭವಾದ ಸ್ವಲ್ಪ ಸಮಯದಲ್ಲಿಯೇ ‘ಅನಾಣ್ಯೀಕರಣ’ದ ನಿರ್ಧಾರ ಮತ್ತು ನಂತರ ಕೆಲವೇ ತಿಂಗಳುಗಳಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಜಾರಿಯಾಯಿತು. ಇದರಿಂದ ಸಕಾರಾತ್ಮಕ ಪರಿಣಾಮಗಳನ್ನು ನಿರೀಕ್ಷಿಸಲಿಕ್ಕಾಗಲಿಲ್ಲ. ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಲು ಕೇಂದ್ರ ಸರ್ಕಾರ ೨೦೨೦-೨೧ರಲ್ಲಿ ‘ಉತ್ಪಾದನೆ ಆಧಾರಿತ ಉತ್ತೇಜನ’ ಯೋಜನೆ ಆರಂಭಿಸಿದೆ.
ಇದು ಐದು ವರ್ಷಗಳ ಯೋಜನೆಯಾಗಿದ್ದು ಒಟ್ಟು ೧೪ ಉತ್ಪಾದಕ ಕೈಗಾರಿಕಾ ವಲಯಗಳಲ್ಲಿ ಮೂರು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಸರ್ಕಾರ ಖರ್ಚು ಮಾಡಲಿದೆ. ಮೊದಲು ಆರಂಭವಾದದು ಮೊಬೈಲ್ ಕಂಪನಿಗಳಲ್ಲಿ. ಅದರ ಯಶಸ್ಸಿನಿಂದ ಉಳಿದೆಡೆ ವಿಸ್ತರಿಸಲಾಗಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿಯೇ ಉತ್ಪಾದಕ (ಚ್ಞ್ಠ್ಛಚ್ಚಠ್ಠ್ಟಿಜ್ಞಿಜ ) ಉದ್ದಿಮೆಗಳ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಟಿಯಿಂದ ‘ಮೇಕ್ ಇನ್ ಇಂಡಿಯಾ’ ವಿಶೇಷ ಯೋಜನೆಯನ್ನು ಪ್ರಕಟಿಸಿತು. ತೆರಿಗೆ ರಿಯಾಯ್ತಿಗಳಲ್ಲದೆ ಹಲವು ಸವಲತ್ತುಗಳು ಈ ಯೋಜನೆಯ ಅಡಿಯಲ್ಲಿ ಹೊಸ ಉತ್ಪಾದಕ ಘಟಕ ಸ್ಥಾಪಿಸುವ ಮತ್ತು ಈಗಿರುವ ಘಟಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಸ್ಥಳೀಯ ಮತ್ತು ವಿದೇಶಿ ಉದ್ಯಮಿಗಳಿಗೆ ದೊರೆಯುತ್ತವೆ. ವಿದೇಶಿ ನೇರ ಬಂಡವಾಳವನ್ನು ಮತ್ತು ಸ್ಥಳೀಯ ಉದ್ಯಮ ಶೀಲರನ್ನು ಈ ವಲಯಕ್ಕೆ ಆಕರ್ಷಿಸುವದು ಯೋಜನೆಯ ಪ್ರಮುಖ ಉದ್ದೇಶಗಳಲ್ಲೊಂದು.
ರಾಷ್ಟ್ರೀಯ ಒಟ್ಟಾದಾಯದಲ್ಲಿ ಉತ್ಪಾದಕ ಕೈಕಾರಿಕೆಗಳ ಪಾಲನ್ನು ಹೆಚ್ಚಿಸುವದು ಇನ್ನೊಂದು ಉದ್ದೇಶ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಮೆಗಳೂ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತವೆ. ದೇಶದಲ್ಲಿ ಮತ್ತು ವಿದೇಶಗಳಲ್ಲಿ ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರ ಕೊಡಲಾಯಿತು.
ಇಲ್ಲಿ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡುವವರಿಗೆ ಇನ್ನಷ್ಟು ಉತ್ತೇಜನಗಳು ಘೋಷಿಸಲ್ಪಟ್ಟಿದೆ. ಮೌಲ್ಯಯುತ ರಫ್ತುಗಳನ್ನು ಹೆಚ್ಚಿಸಿ ನಮ್ಮ ವ್ಯಾಪಾರ ಶೇಷದಲ್ಲಿಯ ಕೊರತೆ ಕಡಿಮೆ ಮಾಡಿ ಉಳಿತಾಯದ ಹಂತಕ್ಕೆ ತರುವದೂ ಒಂದು ಗುರಿ. ‘ಆತ್ಮನಿರ್ಭರ ಭಾರತ’ ಗುರಿಯೆಡೆಗೆ ಮುನ್ನಡೆಯಲು ಇದು ಹೆಚ್ಚು ಸಹಕಾರಿಯಾಗುವದೆಂದೂ ಈ ಯೋಜನೆಯನ್ನು ರೂಪಿಸಲಾಗಿತ್ತು.
ಚೀನದ ಮಾದರಿ
ಡೆಂಗ್ ಆಡಳಿತಾವಧಿಯಿಂದಲೂ (೧೯೯೦ರ ದಶಕದಿಂದ) ಚೀನ ತನ್ನ ದೊಡ್ಡ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಬೆಳೆಸಿ ವಿದೇಶಗಳಿಗೆ ಕಳಿಸುತ್ತ ಜಗತ್ತಿನ ಎರಡನೇ ದೊಡ್ಡ ಅರ್ಥವ್ಯವಸ್ಥೆಯಾಗಿ ಇಂದು ಬೆಳೆದಿರುವದು ಗೊತ್ತಿರುವ ವಿಷಯವೆ. ಅಲ್ಲಿಯ ಪ್ರತಿಯೊಂದು ಮನೆಯೂ ಒಂದು ಸಣ್ಣ ಫ್ಯಾಕ್ಟರಿ. ವಿಶೇಷವಾಗಿ ಸೋಲಾರ್ ವಿದ್ಯುತ್, ವಿದ್ಯುನ್ಮಾನ ಉಪಕರಣಗಳು (ಅದರಲ್ಲಿಯೂ ಸಣ್ಣ ಸಣ್ಣ ಆಟಿಕೆಗಳು ಮತ್ತು ಇತರ ಉದ್ದಿಮೆಗಳಲ್ಲಿ ಉಪಯೋಗಿಸುವ ಸೆಮಿಕಂಡಕ್ಟರ್), ಅಗ್ಗದ ಮೊಬೈಲ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಯಂತ್ರಾಂಶಗಳ ಉತ್ಪಾದನೆಯಲ್ಲಿ ಚೀನ ಬಹಳ ಮುಂದಿದೆ. ಆದ್ದರಿಂದ ಇಂದು ಚೀನವನ್ನು ಜಗತ್ತಿನ ಉತ್ಪಾದನಾ ಘಟಕ ಎಂದು ಕರೆಯಲಾಗುತ್ತದೆ.
ನಮ್ಮೊಡನೆ ಕೆಲವು ಸಾಮ್ಯಗಳನ್ನು ಹೊಂದಿರುವ ಚೀನಕ್ಕೆ ಸಂವಾದಿಯಾಗಿ ಅಥವಾ ಪರ್ಯಾಯವಾಗಿ ಜಗತ್ತಿನ ಫ್ಯಾಕ್ಟರಿಯಾಗಿ (ಕ್ಟೃಟಛ್ಠ್ಚಠಿಜಿಟ್ಞಏಖಿಆ ) ಬೆಳೆಯಲು ಮೇಕ್ ಇನ್ ಇಂಡಿಯಾ ಯೋಜನೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ನಂಬಲಾಗಿದೆ. ಆದರೆ, ಚೀನ ಒಂದೇ ಪಕ್ಷದ ಆಡಳಿತವಿರುವ ಕಮ್ಯುನಿಷ್ಟ್ ರಾಷ್ಟ್ರ. ನಮ್ಮದು ಹಲವು ರಾಜಕೀಯ ಪಕ್ಷಗಳಿರುವ ಮತ್ತು ಸಾಮಾಜಿಕ, ನೈಸರ್ಗಿಕ ಮತ್ತು ಆರ್ಥಿಕ ವೈವಿಧ್ಯತೆಗಳಿರುವ ಪ್ರಜಾಪ್ರಭುತ್ವ. ಸ್ವಾತಂತ್ರ್ಯ ನಂತರ ನಾವು ಹಿಂದಿನ ಯುಎಸ್‌ಎಸ್‌ಆರ್ (ಸೊವಿಯತ್ ಯೂನಿಯನ್) ಅನುಸರಿಸಿದ ಯೋಜನಾಬದ್ಧ ಬೆಳವಣಿಗೆ ಪ್ರಣಾಲಿಯನ್ನು ಅನುಕರಿಸಿದ್ದೆವು. ಆದರೆ, ಅದು ನಿರೀಕ್ಷಿತ ಪರಿಣಾಮಗಳನ್ನು ಕೊಡಲಿಲ್ಲವೆಂದು ಈ ಸರ್ಕಾರ ಅದನ್ನು ನಿಲ್ಲಿಸಿ ಯೋಜನಾ ಆಯೋಗಕ್ಕೆ ಬೇರೆ ಹೆಸರನ್ನೆ ಇಟ್ಟಿತು.
ಯಶಸ್ಸಿಗಾಗಿ ಪಿಎಲ್‌ಐ
ಮೇಕ್ ಇನ್ ಇಂಡಿಯಾ ಆರಂಭವಾದ ಸ್ವಲ್ಪ ಸಮಯದಲ್ಲಿಯೇ ‘ಅನಾಣ್ಯೀಕರಣ’ದ (ಈಛಿಞಟ್ಞಛಿಠಿಜ್ಢಿಠಿಜಿಟ್ಞ ) ನಿರ್ಧಾರ ಮತ್ತು ನಂತರ ಕೆಲವೇ ತಿಂಗಳುಗಳಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಜಾರಿಯಾಯಿತು. ಇದರಿಂದ ಸಕಾರಾತ್ಮಕ ಪರಿಣಾಮಗಳನ್ನು ನಿರೀಕ್ಷಿಸಲಿಕ್ಕಾಗಲಿಲ್ಲ. ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಲು ಕೇಂದ್ರ ಸರ್ಕಾರ ೨೦೨೦-೨೧ರಲ್ಲಿ ‘ಉತ್ಪಾದನೆ ಆಧಾರಿತ ಉತ್ತೇಜನ’ ಯೋಜನೆ ಆರಂಭಿಸಿದೆ.
ಇದು ಐದು ವರ್ಷಗಳ ಯೋಜನೆಯಾಗಿದ್ದು ಒಟ್ಟು ೧೪ ಉತ್ಪಾದಕ ಕೈಗಾರಿಕಾ ವಲಯಗಳಲ್ಲಿ ಮೂರು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಸರ್ಕಾರ ಖರ್ಚು ಮಾಡಲಿದೆ. ಮೊದಲು ಆರಂಭವಾದದು ಮೊಬೈಲ್ ಕಂಪನಿಗಳಲ್ಲಿ. ಅದರ ಯಶಸ್ಸಿನಿಂದ ಉಳಿದೆಡೆ ವಿಸ್ತರಿಸಲಾಗಿದೆ. ಉತ್ಪಾದನೆ ಮತ್ತು ರಫ್ತು ಎರಡಕ್ಕೂ ಇದು ಅನ್ವಯಿಸುತ್ತದೆ.
ಒಂದು ಕೈಗಾರಿಕೆಯಲ್ಲಿ ಯಶಸ್ವಿ ಕಂಪನಿಗಳಲ್ಲಿ ಆಸಕ್ತ ಕಂಪನಿಗಳನ್ನು ನೊಂದಾಯಿಸಿಕೊಂಡು ನಿರ್ದಿಷ್ಟ ಆಧಾರ ವರ್ಷದ ಉತ್ಪಾದನೆ ಅಥವಾ ರಫ್ತು ಮೊತ್ತದೊಡನೆ ಮುಂದಿನ ವರ್ಷದ ಉತ್ಪಾದನೆ ಮತ್ತು ರಫ್ತು ಮೊತ್ತಡೊನೆ ಹೋಲಿಸಿ ನಿರ್ದಿಷ್ಟ ಪ್ರಮಾಣದ ಹೆಚ್ಚಳಕ್ಕೆ ಶೇ.೦೪ ಮತ್ತು ೦೬ ರಂತೆ ನಗದು ಉತ್ತೇಜನ ಕೊಡಲಾಗುವದು. ಕೈಗಾರಿಕೆಯಲ್ಲಿ ಆರಂಭದಿಂದ ೫ ವರ್ಷ ಇರುವುದು.
ಇತ್ತೀಚೆಗೆ ಭಾರತದಲ್ಲಿಯೇ ಸೆಮಿಕಂಡಕ್ಟರ್ ಉತ್ಪಾದಕರಿಗಾಗಿ ದೊಡ್ಡ ಮೊತ್ತದ ಪಿಎಲ್‌ಐ ಘೋಷಿಸಿ ಅಷ್ಟು ಹಣವನ್ನು ತೆಗೆದಿರಿಸಲಾಗಿದೆ. ಸೌರ ಶಕ್ತಿ ಮತ್ತು ಗಾಳಿ ವಿದ್ಯುತ್ ಉತ್ಪಾದನೆ, ವಿದ್ಯುತ್ ವಾಹನ ಮತ್ತು ಬ್ಯಾಟರಿ ಉತ್ಪಾದನೆ ಮುಂತಾದವುಗಳು ಆದ್ಯತೆ ಪಡೆದುಕೊಂಡಿದೆ. ವಾಹನ ಬಿಡಿ ಭಾಗ ತಯಾರಿಗೂ ಆದ್ಯತೆ ಇದೆ.
ಎಂಟು ವರ್ಷಗಳ ನಂತರ
ಇಲ್ಲಿಯವರೆಗೆ ವಿದೇಶಿ ನೇರ ಬಂಡವಾಳ ಪಡೆಯುವಲ್ಲಿ ಮೇಕ್ ಇನ್ ಇಂಡಿಯಾ ಸಾಕಷ್ಟು ಪ್ರಗತಿ ಸಾಧಿಸಿರುವುದು ಕಂಡು ಬಂದಿದೆ. ೨೦೧೪-೧೫ರಲ್ಲಿ ಈ ವಲಯಕ್ಕೆ ೪೫.೧೫ ಬಿಲಿಯನ್ ಡಾಲರ್ ಮಾತ್ರ ಹರಿದು ಬಂದಿದ್ದು, ಇದು ೨೦೨೧-೨೨ರಲ್ಲಿ ೮೩.೬ ಬಿಲಿಯನ್ ಡಾಲರಿಗೆ ಏರಿಕೆಯಾಗಿದೆ ಎಂದು ಅಧಿಕೃತ ವರದಿಗಳು ಹೇಳುತ್ತವೆ. ೧೦೧ ದೇಶಗಳಿಂದ ೫೭ ಕೈಗಾರಿಕೆಗಳಿಗೆ ಹರಿದು ಬಂದಿದೆಯಂತೆ.
ಯೋಜನೆಯಿಂದ ನಮ್ಮ ಒಟ್ಟಾದಾಯದಲ್ಲಿ (ಜಿಡಿಪಿ) ಈ ಉತ್ಪಾದಕ ಉದ್ದಿಮೆಗಳ ಪಾಲು ಹೇಳಿಕೊಳ್ಳುವಷ್ಟು ಹೆಚ್ಚಾಗಿಲ್ಲ. ಈಗ ಒಟ್ಟು ಕೈಗಾರಿಕಾ ವಲಯದ ಪಾಲು ಶೇ.೩೪-೩೫ ಇದ್ದು ಅದರಲ್ಲಿ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಉತ್ಪಾದಕ ಕೈಗಾರಿಕೆಗಳದ್ದು. ಹಿಂದೆಯೂ ಇದೆ ಪ್ರಮಾಣದಲ್ಲಿ ಇದ್ದದ್ದು ಒಂದೆರಡು ಪಾಯಿಂಟ್ ಹೆಚ್ಚಾಗಿದ್ದರೆ ಅದೇ ಹೆಚ್ಚು. ಸಣ್ಣದಿದ್ದರೂ ಮುನ್ನಡೆಯಂತು ಇದೆ.
ಕೆಲವು ಚೀನಿ ಕಂಪನಿಗಳು ‘ಮೇಕ್ ಇನ್ ಇಂಡಿಯಾ’ ವನ್ನು ‘ಅಸೆಂಬಲ್ ಇನ್ ಇಂಡಿಯಾ’ ಮಾಡಿ ಸಿಕ್ಕಿಕೊಂಡದ್ದೂ ಉಂಟು. ಕೆಲವು ಚೀನೀ ಮೊಬೈಲ್ ಕಂಪನಿಗಳು ಯೋಜನೆಯನ್ನು ದುರಪಯೋಗ ಮಾಡಿಕೊಂಡು ಹಣ ಪರಭಾರೆ ಮಾಡಿರುವ ಆಪಾದನೆಗಳೂ ವರದಿಯಾಗಿವೆ. ಯೋಜನೆಯ ಲೋಪ ದೋಷಗಳನ್ನು ಗುರುತಿಸಿ ಸರಿಪಡಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.
ಒಂದು ಮಾತು: ಭಾರತೀಯ ರಿಜರ್ವ್ ಬ್ಯಾಂಕ್‌ನ ಹಿಂದಿನ ಗವರ್ನರ್ ರಘುರಾಮ್ ರಾಜನ್ ಹೇಳುವಂತೆ ಈ ಚೀನೀ ಮಾದರಿ ಬಿಟ್ಟು ನಮ್ಮಲ್ಲಿ ಸೇವಾ ವಲಯ ಪ್ರಬಲವಾಗಿದ್ದು, ಜಿಡಿಪಿಗೆ ಶೇ.೫೦ರಷ್ಟು ಕಾಣಿಕೆ ಸಲ್ಲಿಸುತ್ತಿದೆ. ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡಿ ಸೇವಾ ವಲಯ ಮುಂದಾಳತ್ವದ ಮಾದರಿಗೆ ಬದಲಿಸುವದು ಒಳ್ಳೆಯದು.