Mysore
19
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಬ್ರಿಕ್ಸ್ ಆಕರ್ಷಣೆ, ಡಾಲರ್‌ಗೆ ಪರ್ಯಾಯ ರೂಪಿಸುವ ಪ್ರಯತ್ನ

 

ಫ್ರಾನ್ಸ್ ದೇಶದ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಯೂರೋಪ್ ಅಷ್ಟೇ ಏಕೆ ಪಶ್ಚಿಮ ರಾಷ್ಟ್ರಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆಮುಂದಿನ ಆಗಸ್ಟ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್ ನಗರದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ತಮಗೂ ಆಹ್ವಾನ ನೀಡಬೇಕೆಂದು ಕೋರಿರುವುದೇ ಈ ಬಿರುಗಾಳಿಗೆ ಕಾರಣಅಮೆರಿಕ ನೇತೃತ್ವದ ಶಕ್ತಿರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿ ಕೊಂಡಿರುವ ಮೆಕ್ರಾನ್ ರಷ್ಯಾಚೀನಾ ನೇತೃತ್ವದ ಬ್ರಿಕ್ಸ್ ಸಂಘಟನೆ ಬಗ್ಗೆ ಆಸಕ್ತಿ ತೋರಿಸಿರುವುದು ಆಶ್ಚರ್ಯ ಹುಟ್ಟಿಸಿದೆಈಗಾಗಲೇ ಸೌದಿ ಅರೇಬಿಯಾಈಜಿಪ್ಟ್ಯುಎಇಇರಾನ್ಇಂಡೋನೇಷ್ಯಾ ಸೇರಿದಂತೆ 19 ದೇಶಗಳು ಬ್ರಿಕ್ಸ್ ಸಂಘಟನೆಯ ಭಾಗವಾಗಲು ಮುಂದಾಗಿರುವುದು ಬದಲಾಗುತ್ತಿರುವ ಜಾಗತಿಕ ಆರ್ಥಿಕ ಶಕ್ತಿ ರಾಜಕೀಯದ ಸಂಕೇತವೆಂದೇ ಹೇಳಲಾಗುತ್ತಿದೆ.

ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಚೀನಾರಷ್ಯಾಭಾರತಬ್ರೆಜಿಲ್ದಕ್ಷಿಣ ಆಫ್ರಿಕಾದ ಗುಂಪೇ ಬ್ರಿಕ್ಸ್ವಾಣಿಜ್ಯ ವಹಿವಾಟುಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಸಹಕಾರ ಸಾಧಿಸುವ ಗುರಿ ಇಟ್ಟುಕೊಂಡು 2009ರಲ್ಲಿ ಆರಂಭವಾದ ಈ ಸಂಘಟನೆ ಇದುವರೆಗೆ ಗಮ ನಾರ್ಹವಾದ ಪ್ರಗತಿಯನ್ನೇನೂ ಸಾಧಿಸಿಲ್ಲಅಭಿವೃದ್ಧಿ ದೇಶಗಳನ್ನು ಒಳಗೊಂಡ ಜಿ7ಜಿ-20 ಸಂಘಟನೆಗಳೇ ವಿಶ್ವದ ಆರ್ಥಿಕ ಆಗುಹೋಗುಗಳನ್ನು ನಿಭಾಯಿಸುತ್ತಿದ್ದವುಆದರೆ ಅಮೆರಿಕ ಪ್ರಣೀತ ತತ್ವಸಿದ್ಧಾಂತಗಳಿಗೆ ಬದ್ಧವಾಗಿದ್ದ ಈ ಸಂಘಟನೆಗಳ ಬಗ್ಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಾಯಕರು ಅಷ್ಟೇನೂ ಭರವಸೆ ಇಟ್ಟುಕೊಂಡಿರಲಿಲ್ಲಈ ಅಸಮಾಧಾನ ಇದೀಗ ಬ್ರಿಕ್ಸ್ ಸಂಘಟನೆಯ ಸ್ವರೂಪದಲ್ಲಿ ಬಹಿರಂಗಗೊಂಡಂತೆ ಕಾಣುತ್ತಿದೆ.

ಈ ಬೆಳವಣಿಗೆಗೆ ಮುಖ್ಯವಾದ ಕಾರಣ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧಯುದ್ಧಕ್ಕಿಂತ ಅದರ ಹೆಸರಿನಲ್ಲಿ ರಷ್ಯಾದ ವಿರುದ್ಧ ಅಮೆರಿಕ ಮತ್ತು ಯೋರೋಪ್ ದೇಶಗಳು ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳುಡಾಲರ್‌ಅನ್ನು ಆಯುಧವಾಗಿ ಬಳಸಿ ರಷ್ಯಾವನ್ನು ಆರ್ಥಿಕವಾಗಿ ಕಟ್ಟಿಹಾಕುವ ಅಮೆರಿಕದ ಮಾರ್ಗ ಇದೀಗ ತೀವ್ರ ವಿವಾದಕ್ಕೆ ಒಳಗಾಗಿದೆಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆಮುಖ್ಯವಾಗಿ ರಷ್ಯಾದಿಂದ ಪೂರೈಕೆಯಾಗುತ್ತಿದ್ದ ಅನಿಲ ಮತ್ತು ತೈಲ ನಿಂತಿದ್ದರಿಂದ ಯೂರೋಪ್‌ನ ಅರ್ಥವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆಯೂರೋಪ್ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆಇದು ಹಣದುಬ್ಬರಕ್ಕೆ ಕಾರಣವಾಗಿದೆಆಹಾರ ಧಾನ್ಯಗಳ ಸಾಗಣೆಯಲ್ಲಿ ವ್ಯತ್ಯಯವಾಗಿ ಆಫ್ರಿಕಾ ದೇಶಗಳ ಜನರು ಪರದಾಡುವಂತಾಗಿದೆರಷ್ಯಾ ತೈಲ ಮತ್ತು ಅನಿಲ ಸಂಪನ್ಮೂಲ ದೇಶತೈಲ ಮತ್ತು ಅನಿಲ ಅದರ ಆದಾಯದ ಮೂಲಉಕ್ರೇನ್ ಮೇಲೆ ಮಿಲಿಟರಿ ದಾಳಿ ಮಾಡಿದ್ದಕ್ಕಾಗಿ ರಷ್ಯಾವನ್ನು ಶಿಕ್ಷಿಸಲು ಅಮೆರಿಕ ದಂತೆ ಯೂರೋಪಿಯನ್ ಒಕ್ಕೂಟ ಕೂಡ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ನಿರ್ಬಂಧ ವಿಧಿಸಿತುರಷ್ಯಾದ ಆರ್ಥಿಕ ಮೂಲವನ್ನು ಕತ್ತರಿಸುವುದು ಅಮೆರಿಕದ ಉದ್ದೇಶರಷ್ಯಾ ಸುಮಾರು ಮುನ್ನೂರು ಟ್ರಿಲಿಯನ್ ಡಾಲರ್‌ಗಳನ್ನು ವಿದೇಶೀ ವಿನಿಮಯ ಸಂಗ್ರಹವಾಗಿ ಅಮೆರಿಕದ ಬ್ಯಾಂಕ್‌ಗಳಲ್ಲಿ ಕ್ರಮೇಣ ಇಟ್ಟಿತ್ತುಡಾಲರ್ ಮೂಲಕ ಯಾವುದೇ ವ್ಯವಹಾರ ಮಾಡದಂತೆ ರಷ್ಯಾ ಮೇಲೆ ನಿರ್ಬಂಧ ವಿಧಿಸಲಾಯಿತುರಷ್ಯಾವನ್ನು ಆರ್ಥಿಕವಾಗಿ ಕಟ್ಟಿಹಾಕುವ ಅಮೆರಿಕದ ಈ ಯತ್ನ ಕ್ರಮೇಣ ವಿಫಲವಾಗುತ್ತಿರುವುದು ಹೊಸ ಸಮಸ್ಯೆಗಳಿಗೆ ಕಾರಣವಾಗಿದೆರಷ್ಯಾ ತನ್ನ ಮಿತ್ರ ರಾಷ್ಟ್ರಗಳಾದ ಚೀನಾ ಮತ್ತು ಭಾರತಕ್ಕೆ ತೈಲವನ್ನು ಕಡಿಮೆ ದರಗಳಲ್ಲಿ ಪೂರೈಸಲಾರಂಭಿಸಿತುಬುದ್ಧಿವಂತಿಕೆಯಿಂದ ಈ ದೇಶಗಳು ಆ ತೈಲವನ್ನು ಸಂಸ್ಕರಿಸಿ ಮಾರಾಟ ಮಾಡತೊಡಗಿದವುವಿಚಿತ್ರ ಎಂದರೆ ಯಾವ ಯೂರೋಪ್ ದೇಶಗಳು ರಷ್ಯಾ ತೈಲವನ್ನು ನಿಷೇಧಿಸಿದ್ದವೋ ಅವುಗಳಿಗೆ ಭಾರತ ಮತ್ತು ಚೀನಾ ಮಾರಾಟ ಮಾಡತೊಡಗಿವೆಹೆಸರಿಗೆ ಮಾತ್ರ ಭಾರತ ಮತ್ತು ಚೀನಾದಿಂದ ಬಂದ ತೈಲಇದರಿಂದ ರಷ್ಯಾಕ್ಕೂ ಆದಾಯಮಾರಾಟ ಮಾಡಿದ ಭಾರತ ಮತ್ತು ಚೀನಾಕ್ಕೂ ಲಾಭಈ ಬೆಳವಣಿಗೆಯಿಂದಾಗಿ ರಷ್ಯಾವನ್ನು ಆರ್ಥಿಕವಾಗಿ ಕೊಲ್ಲುವ ಅಮೆರಿಕ ಮತ್ತು ಯೂರೋಪಿಯನ್ ಒಕ್ಕೂಟದ ಉದ್ದೇಶ ವಿವಾದಕ್ಕೆ ಒಳಗಾಗಿದೆಡಾಲರ್ ಅನ್ನು ಅಸ್ತ್ರವಾಗಿ ಬಳಸಿದ್ದರಿಂದ ತಮ್ಮ ದೇಶದ ಆರ್ಥಿಕತೆಯ ಮೇಲೆ ಆದ ಕೆಟ್ಟ ಪರಿಣಾಮವನ್ನು ನಿಭಾಯಿಸಲು ಮೆಕ್ರಾನ್ ಅವರು ಬ್ರಿಕ್ಸ್ ಕಡೆಗೆ ಹೆಜ್ಜೆ ಇಟ್ಟಂತೆ ಕಾಣುತ್ತಿದೆಇಂದು ಫ್ರಾನ್ಸ್ನಾಳೆ ಜರ್ಮನಿ ಇದೇ ರೀತಿ ಬ್ರಿಕ್ಸ್ ಸದಸ್ಯತ್ವ ಕೇಳಿದರೆ ಆಶ್ಚರ್ಯವಿಲ್ಲ.

ಅಮೆರಿಕ ಮತ್ತಿತರ ದೇಶಗಳು ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧಗಳು ಡಾಲರ್ ಮೇಲಿನ ಒತ್ತಡವನ್ನು ಜಾಸ್ತಿ ಮಾಡಿವೆಡಾಲರ್ ಪ್ರಾಬಲ್ಯ ಕ್ರಮೇಣ ಕುಸಿಯುತ್ತಿದೆಡಾಲರ್ ವಿಶ್ವದಲ್ಲಿ ಅತಿ ಹೆಚ್ಚು ಮಾನ್ಯತೆ ಗಳಿಸಿರುವ ವಿದೇಶೀ ವಿನಿಮಯ ಹಣಬಹುಪಾಲು ಎಲ್ಲ ದೇಶಗಳು ತಮ್ಮ ವಾಣಿಜ್ಯ ವಹಿವಾಟನ್ನು ಡಾಲರ್ ಮೂಲಕವೇ ನಡೆಸುತ್ತವೆಡಾಲರ್‌ಗೆ ಅಂಥ ಮಾನ್ಯತೆ ಇದೆಡಾಲರ್ ಒಂದು ಪೇಪರ್ ಚೂರು ಇರಬಹುದುಆದರೆ ಅದಕ್ಕಿರುವ ಆರ್ಥಿಕ ಶಕ್ತಿ ಬೇರೆ ಯಾವುದೇ ದೇಶದ ಹಣಕ್ಕೂ ಇಲ್ಲಒಂದು ದೇಶದ ಆರ್ಥಿಕ ಸ್ಥಿತಿಯನ್ನು ಅದು ತನ್ನ ವಿದೇಶೀ ವಿನಿಮಯ ಖಾತೆಯಲ್ಲಿ ಎಷ್ಟು ಡಾಲರ್ ಸಂಗ್ರಹಿಸಿ ಕೂಡಿಟ್ಟಿದೆ ಎನ್ನುವುದರ ಮೇಲೆ ಲೆಕ್ಕ ಹಾಕಲಾಗುತ್ತದೆಇಂಥ ಡಾಲರ್‌ಅನ್ನು ಅಮೆರಿಕವು ರಷ್ಯಾವನ್ನು ಮುಗಿಸಲು ಅಸ್ತ್ರವಾಗಿ ಬಳಸಿದ್ದು ವಿಶ್ವದ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದೆಹೀಗಾಗಿ ಡಾಲರ್‌ಗೆ ಪರ್ಯಾಯವನ್ನು ಸೃಷ್ಟಿಸುವತ್ತ ದೇಶಗಳು ಯೋಚಿಸುವಂತೆ ಮಾಡಿದೆಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ ಡಾಲರ್‌ನ ಪಾತ್ರವನ್ನು ವಾಣಿಜ್ಯ ವಹಿವಾಟು ಮತ್ತು ಬದುಕಿನ ಇತರ ಕ್ಷೇತ್ರಗಳಲ್ಲಿ ಕಡಿಮೆ ಮಾಡುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ.

ರಷ್ಯಾದ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದ ಬೆನ್ನಲ್ಲೇ ಡಾಲರ್‌ಗೆ ಪರ್ಯಾಯ ಕರೆನ್ಸಿಯೊಂದನ್ನು ಗುರುತಿಸುವ ಕೆಲಸ ಆಗಬೇಕೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ರಿಕ್ಸ್ ಸಭೆಯೊಂದರಲ್ಲಿ ಸಲಹೆ ಮಾಡಿದ್ದರುಮೊದಲ ಹಂತವಾಗಿ ವಾಣಿಜ್ಯ ವಹಿವಾಟನ್ನು ಆಯಾ ದೇಶಗಳ ಕರೆನ್ಸಿಯಲ್ಲಿಯೇ ನಡೆಸಲು ತೀರ್ಮಾನಿಸಲಾಗಿತ್ತುಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಭಾರತಕ್ಕೆ ಸೀಮಿತವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ವ್ಯವಸ್ಥೆಯನ್ನು ಈಗಾಗಲೇ ರೂಪಿಸಿದೆಬೇರೆ ದೇಶಗಳ ಜೊತೆಗಿನ ವಾಣಿಜ್ಯ ವಹಿವಾಟಿನಲ್ಲಿ ಭಾರತ ರೂಪಾಯಿಯನ್ನೇ ಕರೆನ್ಸಿಯಾಗಿ ಬಳಸುತ್ತಿದೆತೈಲ ವಿಚಾರದಲ್ಲಿ ರೂಪಾಯಿ ಲೆಕ್ಕದಲ್ಲಿ ಹಣ ನೀಡಲು ರಷ್ಯಾ ಕೂಡ ಅಗತ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆರಷ್ಯಾ ರೂಬೆಲ್ ಮೂಲಕ ವಹಿವಾಟು ನಡೆಸಿದರೆ ಪ್ರತಿಯಾಗಿ ಭಾರತ ರೂಪಾಯಿ ಮೂಲಕ ಹಣ ನೀಡುತ್ತಿದೆಆದರೆ ಡಾಲರ್‌ನಂತೆ ರೂಪಾಯಿ ವಿಶ್ವವ್ಯಾಪಿ ಹಣವಲ್ಲಭಾರತ ಮತ್ತು ರಷ್ಯಾಕ್ಕೆ ಸೀಮಿತವಾದ ವ್ಯವಸ್ಥೆಈ ಮಧ್ಯೆ ಚೀನಾ ಕೂಡ ತನ್ನ ಕರೆನ್ಸಿ ಯುಯಾನ್ ಮೂಲಕ ವಹಿವಾಟು ನಡೆಸುತ್ತಿದೆಸೌದಿ ಅರೇಬಿಯಾದಿಂದ ಪೂರೈಸಲಾಗುವ ತೈಲಕ್ಕೆ ಹಣವನ್ನು ರೆನ್‌ಮಿಂಬಿ ಅಥವಾ ಯುಯಾನ್ ಹಣದ ಮೂಲಕ ಕೊಡುತ್ತಿದೆಈ ಸಂಬಂಧವಾಗಿ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆಬ್ರಿಕ್ಸ್‌ನ ಇತರ ಸದಸ್ಯ ದೇಶಗಳ ಕರೆನ್ಸಿಗೆ ಹೋಲಿಸಿದರೆ ಚೀನಾದ ಯುಯಾನ್ ಬ್ರಿಕ್ಸ್‌ನ ಕರೆನ್ಸಿಯಾಗುವ ಅರ್ಹತೆ ಪಡೆದಿದೆಡಾಲರ್ ನಂತರ ಹೆಚ್ಚು ದೇಶಗಳಲ್ಲಿ ಮಾನ್ಯತೆ ಪಡೆದಿರುವ ಹಣ ಯೂರೋಆದರೆ ಯೂರೋಪಿಯನ್ ಒಕ್ಕೂಟ ಅಮೆರಿಕದ ಜೊತೆಗೂಡಿ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಸದ್ಯಕ್ಕೆ ಯೂರೋ ಪರ್ಯಾಯ ವಿದೇಶೀ ವಿನಿಮಯ ಹಣವಾಗುವ ಸಾಧ್ಯತೆ ಇಲ್ಲಆದರೆ ಕೆಲವು ದೇಶಗಳು ಹೊಸದೇ ಒಂದು ‘ಬ್ರಿಕ್ಸ್’ ಕರೆನ್ಸಿ ಚಾಲ್ತಿಗೆ ತರುವಂತೆ ಒತ್ತಾಯಿಸುತ್ತಿರುವುದರಿಂದ ಈ ವಿಚಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ಶೃಂಗಸಭೆಯಲ್ಲಿ ಚರ್ಚೆಗೆ ಬರಲಿದೆ.

ಎರಡನೆಯ ಮಹಾಯುದ್ಧದ ಕಾಲದಿಂದಲೂ ಅಮೆರಿಕದ ಡಾಲರ್ ಜಾಗತಿಕ ಕರೆನ್ಸಿಯಾಗಿದೆಕಳೆದ ಎರಡು ದಶಕಗಳಿಂದ ಡಾಲರ್ ಪ್ರಬಲವಾಗಿಯೇ ಇದೆಡಾಲರ್ ಇಷ್ಟೊಂದು ಪ್ರಭಾವ ಬೆಳೆಸಿಕೊಳ್ಳಲು ಮುಖ್ಯ ಕಾರಣ ಅಮೆರಿಕದ ಬಲಾಢ್ಯ ಆರ್ಥಿಕ ಸ್ಥಿತಿಈಗ ಅಮೆರಿಕದ ಆರ್ಥಿಕ ಸ್ಥಿತಿ ಮೊದಲಿನಂತೆ ಇಲ್ಲಹೀಗಾಗಿ ಅಂತಾರಾಷ್ಟ್ರೀಯವಾಗಿ ಡಾಲರ್ ಬೆಲೆ ಕಡಿಮೆಯಾಗಿದೆಆದರೂ ಬೇರೆ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್‌ನ ಪರಿಸ್ಥಿತಿ ಉತ್ತಮವಾಗಿಯೇ ಇದೆ. ‘ಡಾಲರ್ ಪ್ರಾಬಲ್ಯ ಕ್ರಮೇಣ ಕಡಿಮೆಯಾಗಿರುವುದು ನಿಜಮೊದಲು ವಿಶ್ವದ ಒಟ್ಟು ಕರೆನ್ಸಿ ಮೊತ್ತದಲ್ಲಿ ಡಾಲರ್‌ನ ಸಿಂಹಪಾಲು ಇತ್ತುಆದರೆ ಅದು ಕ್ರಮೇಣ ಕರಗುತ್ತ ಬಂದಿದೆಆದರೆ ಪ್ರಾಬಲ್ಯ ಅಳಿಸಿಹೋಗದು’ ಎಂದು ಅಮೆರಿಕದ ಟ್ರೆಶರಿ ಸೆಕ್ರೆಟರಿ (ಹಣಕಾಸು ಸಚಿವೆಜಾನೆಟ್ ಯೆಲೆನ್ ತಿಳಿಸಿದ್ದಾರೆಇದೇ ರೀತಿ ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಅಭಿಪ್ರಾಯಪಟ್ಟಿದೆ.

 

ಇದೇನೇ ಇದ್ದರೂ ಡಾಲರ್‌ಗೆ ಪರ್ಯಾಯ ಕಟ್ಟುವ ಪ್ರಯತ್ನಗಳು ಆರಂಭವಾಗಿವೆಇದೀಗ ಬ್ರಿಕ್ಸ್ ತನ್ನದೇ ಆದ ಬ್ಯಾಂಕ್ ಆರಂಭಿಸಿದೆಆರ್ಥಿಕ ತಜ್ಞರ ಪ್ರಕಾರ ಪರ್ಯಾಯ ರೂಪಿಸಲು ಇನ್ನೂ ಎರಡು ದಶಕಗಳಾದರೂ ಬೇಕುಅದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎನ್ನುವುದನ್ನು ಮುಂದಿನ ಬೆಳವಣಿಗೆಗಳೇ ನಿರ್ಧರಿಸುತ್ತವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!