Mysore
22
light rain
Light
Dark

ಗ್ರಾಮೀಣ ಬ್ಯಾಂಕುಗಳು ಹತ್ತರೊಡನೆ ಹನ್ನೊಂದಾಗಿವೆಯೇ?

ಗ್ರಾಮೀಣ ಪ್ರದೇಶದಲ್ಲಿ ಆರ್‌ಆರ್‌ಬಿಗಳ ಸಾಲದ ಪಾಲು ಈಗ ಶೇ.೧೧ಕ್ಕೆ ಕುಸಿದಿದ್ದು ಅಸ್ತಿತ್ವ ಕಳೆದುಕೊಳ್ಳುವ ಹಾದಿಯಲ್ಲಿ ಸಾಗುತ್ತಿವೆ!
ಪ್ರೊ.ಆರ್.ಎಂ.ಚಿಂತಾಮಣಿ

ಅತಿಯಾದ ಸಿಬ್ಬಂದಿ ಮತ್ತು ಆಡಳಿತ ವೆಚ್ಚಗಳು. ಹಳ್ಳಿಗಳ ಅರ್ಥವ್ಯವಸ್ಥೆಯಲ್ಲಿ ಆಸಕ್ತಿಯೇ ಇಲ್ಲದೆ ನಗರವಾಸಿ ಸಿಬ್ಬಂದಿಗಳ ನಿಯಮದಂತೆ ಕೆಲಸ ಮಾಡುವ ಪ್ರವೃತ್ತಿ, ದಿನಗಳೆದಂತೆ ಸಾಲ ವಸೂಲಾತಿಯಲ್ಲಿ ಕುಸಿತ ಮತ್ತು ದುರುದ್ದೇಶದ ಸುಸ್ತಿ ಸಾಲಗಳ ಹೆಚ್ಚಳ ಮುಂತಾದ ಕಾರಣಗಳಿಂದ ೧೯೯೦ರ ದಶಕದ ಆರಂಭದಲ್ಲಿಯೇ ಅರ್ಥಕ್ಕಿಂತ ಹೆಚ್ಚು ಬ್ಯಾಂಕುಗಳು ದೊಡ್ಡ ಗಾತ್ರದ ನಷ್ಟ ಅನುಭವಿಸಲಾರಂಭಿಸಿದ್ದವು. ಸರಿಪಡಿಸುವ ಪ್ರಯತ್ನಗಳು ವಿಫಲವಾದಾಗ ಆಗಿನಿಂದಲೇ ಅವುಗಳನ್ನು ಲಾಭದಲ್ಲಿರುವ ಬ್ಯಾಂಕುಗಳಲ್ಲಿ ವಿಲೀನ ಪ್ರಕ್ರಿಯೆ ಆರಂಭಿಸಲಾಯಿತು. ಇದರಿಂದ ೨೦೧೧ರ ಹೊತ್ತಿಗೆ ೮೨ ದೊಡ್ಡ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದವು.

ಈ ಹತ್ತು ವರ್ಷಗಳಲ್ಲಾದರೂ ಸುಧಾರಣೆ ಕಂಡು ಬರಲಿ ಎಂದು ಸರ್ಕಾರ ಹೆಚ್ವುವರಿ ಬಂಡವಾಳವನ್ನೂ ಒದಗಿಸಿತು. ಆದರೂ ಪರಿಣಾಮ ಕಾಣದಿದ್ದಾಗ ವಿಲೀನ ಮುಂದುವರಿದು ಈಗ ಪ್ರತಿ ರಾಜ್ಯಕ್ಕೆ ಒಂದು ಅಥವಾ ಎರಡರಂತೆ ಒಟ್ಟು ೪೩ ಬ್ಯಾಂಕುಗಳಾಗಿವೆ.

೧೯೬೯ರ ರಾಷ್ಟ್ರೀಕರಣದ ನಂತರವೂ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ನಿರೀಕ್ಷಿತ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳಿಗೆ ನುಗ್ಗದಿದ್ದಾಗ ಈ ಬ್ಯಾಂಕುಗಳ ಪಾಲುದಾರಿಕೆಯಲ್ಲಿಯೇ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ವಿಶಿಷ್ಟ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆ ಸರ್ಕಾರಕ್ಕೆ ಬಂತು. ಆಗ ಎಂ.ನರಸಿಂಹನ್ ಸಮಿತಿಯ ಶಿಫಾರಸ್ಸಿನಂತೆ ೧೯೭೫ರಲ್ಲಿ ವಿಶೇಷ ಕಾಯ್ದೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದವುಗಳೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (್ಕಛಿಜಜಿಟ್ಞಚ್ಝ ್ಕ್ಠ್ಟಚ್ಝ ಆಚ್ಞ). ಅಂದು ಎರಡು ಮೂರು ಜಿಲ್ಲೆಗಳಿಗೆ ಒಂದರಂತೆ ೧೯೬ ಬ್ಯಾಂಕುಗಳನ್ನು ೫೦೦ ಜಿಲ್ಲೆಗಳಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಸರ್ಕಾರ, ಆಯಾ ರಾಜ್ಯ ಸರ್ಕಾರ ಮತ್ತು ಪ್ರವರ್ತಕ ಸರ್ಕಾರಿ ಬ್ಯಾಂಕುಗಳಿಂದ ಅನುಕ್ರಮವಾಗಿ ಶೇ.೫೦, ೩೫ ಮತ್ತು ೧೫ ಬಂಡವಾಳವನ್ನು ಒದಗಿಸಲಾಯಿತು. ಆಡಳಿತದಲ್ಲಿ ಪ್ರಮುಖ ಪಾತ್ರ ಪ್ರವರ್ತಕ ಬ್ಯಾಂಕಿನದು.

ಸಹಕಾರಿ ಸಂಸ್ಥೆಗಳಂತೆ ಸ್ಥಳೀಯ ಅರ್ಥ ವ್ಯವಸ್ಥೆ ಲಕ್ಷಣಗಳು ಮತ್ತು ಅದರ ಹಣಕಾಸು ಅವಶ್ಯಕತೆಗಳು ಪೂರ್ಣ ಅರಿವು ಮತ್ತು ವಾಣಿಜ್ಯ ಬ್ಯಾಂಕುಗಳ ವೃತ್ತಿ ಪರತೆ ಎರಡನ್ನೂ ಹೊಂದಿ ಗ್ರಾಮೀಣ ಬ್ಯಾಂಕುಗಳು ಗ್ರಾಮಾಭಿವೃದ್ಧಿಯಲ್ಲಿ ಮಂಚೂಣಿಯಲ್ಲಿರಬೇಕೆಂಬುದು ಮುಖ್ಯ ಉದ್ದೇಶ. ಆರಂಭದಲ್ಲಿ ಹಳ್ಳಿಗಳಲ್ಲಿ ಮಾತ್ರ ಶಾಖೆಗಳಿರಬೇಕೆಂಬ ನಿಯಮ ಇತ್ತು. ಜಿಲ್ಲಾ ಕೇಂದ್ರಗಳಲ್ಲಿ ಆಡಳಿತ ಕಚೇರಿಗಳು ಮಾತ್ರ ಇದ್ದವು. ನಂತರ ಆರ್ಥಿಕ ಸದೃಢತೆಯ ದೃಷ್ಟಿಯಿಂದ ನಿಯಮ ಸಡಿಲಿಸಿ ೧೯೯೦ರ ದಶಕದಲ್ಲಿ ನಗರಗಳಲ್ಲಿಯೂ ಶಾಖೆಗಳನ್ನು ತೆರೆಯಲು ಅನುಮತಿ ನೀಡಲಾಯಿತು.

ಹಳ್ಳಿಗಾಡಿನಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಒದಗಿಸುವುದು, ಕುಶಲಕರ್ಮಿಗಳು ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಅವರ ಉದ್ಯೋಗಗಳಿಗೆ ಸಂಬಂಧಿಸಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವುದಲ್ಲದೆ ಅವುಗಳ ಸದುಪಯೋಗವಾಗುವಂತೆ ನೋಡಿಕೊಂಡು ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ ಮಾಡುವುದು ಮತ್ತು ಮಹಿಳೆಯರು ಮತ್ತು ಪುರುಷರ ‘ಸ್ವ ಸಹಾಯ ಸಂಘ’ಗಳನ್ನು ಮತ್ತು ಬೆಳೆಸಲು ನೆರವಾಗುವುದು ಗ್ರಾಮೀಣ ಬ್ಯಾಂಕುಗಳ ಕಾರ್ಯಗಳಲ್ಲಿ ಪ್ರಮುಖವಾದವುಗಳು. ಗ್ರಾಮೀಣರದಲ್ಲಿ ಉಳಿತಾಯ ಪ್ರವೃತ್ತಿಯನ್ನು ಬೆಳೆಸಿ ಅವುಗಳನ್ನು ಆಕರ್ಷಿಸಲು ಠೇವಣಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವದು ಇನ್ನೊಂದು ಕಾರ್ಯ.

ಬ್ಯಾಂಕು ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರ ಜನ ಸಂಪರ್ಕದಲ್ಲಿದ್ದು ಹಳ್ಳಿಗಳಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಹೊಸ ಆರ್ಥಿಕ ಚಟುವಟಿಕೆಗಳ ಸಾಧ್ಯತೆಗಳ ಬಗ್ಗೆ ಮಾರ್ಗದರ್ಶನ ನೀಡಬೇಕು ಮತ್ತು ಹಣಕಾಸು ವ್ಯವಸ್ಥೆಯನ್ನು ಖಾಸಗಿ ಲೇವಾದೇವಿದಾರರಿಂದ ಮುಕ್ತಗೊಳಿಸಿ ಮತ್ತು ಶೋಷಣೆ ತಪ್ಪಿಸಿ ಸಾಂಸ್ಥಿಕ ವ್ಯವಸ್ಥೆಗೆ ಒಳಪಡಿಸಿ ಹಳ್ಳಿಗರ ವಿಶ್ವಾಸದೊಂದಿಗೆ ಗ್ರಾಮೋದಯದ ಹರಿಕಾರರಾಗಬೇಕೆಂಬ ಸದುದ್ದೇಶವಿತ್ತು. ಬಹಳ ನಿರೀಕ್ಷೆಗಳಿದ್ದವು.

ಬೆಳವಣಿಗೆಯೊಡನೆ ನಷ್ಟವೂ ಹೆಚ್ಚಾಯಿತು

ಆರಂಭದಲ್ಲಿ ತಕ್ಕಮಟ್ಟಿಗೆ ಪ್ರಗತಿ ಕಂಡು ಬಂದಿತು. ದೇಶಾದ್ಯಂತ ೧೫೦೦೦ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಲಾಯಿತು. ಕೃಷಿ ಸಾಲಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅತಿ ಕಡಿಮೆ ಬಡ್ಡಿ ದರಗಳಲ್ಲಿ ಕೊಡುವ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಮುಂದುವರಿಯಿತು. ಆಗ ಜಾರಿಯಲ್ಲಿದ್ದ ವಿಶೇಷ ಬಡ್ಡಿ ದರ (ಈಜ್ಛ್ಛಿಛ್ಟಿಛ್ಞಿಠಿಜಿಚ್ಝ ್ಟಠಿಛಿ ಟ್ಛ ಜ್ಞಿಠಿಛ್ಟಿಛಿಠಿ ಈಐ್ಕ) ಯೋಜನೆಯಡಿಯಲ್ಲಿ ಶೇ.೪ರ ಬಡ್ಡಿದರದಲ್ಲಿ ಕಡು ಬಡವರಿಗೆ ಸ್ವ ಉದ್ಯೋಗ ಆರಂಭಿಸಲು ಅಂದಿನ ಲೆಕ್ಕದಲ್ಲಿ ೫೦೦೦ ರೂ.ಸಾಲ ಕೊಡಲಾಗುತ್ತಿತ್ತು. ಚಾಲ್ತಿಯಲ್ಲಿರುವ ಬಡ್ಡಿ ದರದ ಅಂತರವನ್ನು ಸರ್ಕಾರವೇ ಭರಿಸುತ್ತಿತ್ತು. ಹೀಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಬ್ಯಾಂಕುಗಳೆಂದೇ ಗ್ರಾಮೀಣ ಬ್ಯಾಂಕುಗಳನ್ನು ಕರೆಯಲಾಗುತ್ತಿತ್ತು. ಹೈನುಗಾರಿಕೆ ಮಾಡುವವರಿಗೆ, ತಲೆ ಮೇಲೆ ಹೊತ್ತು ತರಕಾರಿ ಮಾರುವವರಿಗೆ, ಬೀದಿ ವ್ಯಾಪಾರಿಗಳಿಗೆ, ಸಂತೆಗಳಿಗೆ ಸುತ್ತುತ್ತ ವ್ಯಾಪಾರ ಮಾಡುವವರಿಗೆ, ಕುಶಲ ಕರ್ಮಿಗಳಿಗೆ ಮುಂತಾದವರಿಗೆ ಇದರಿಂದ ಉಪಯೋಗವಾದದ್ದುಂಟು. ಆದರೆ, ಗ್ರಾಮೀಣ ಠೇವಣಿಗಳನ್ನು (ಉಳಿತಾಯಗಳನ್ನು) ಸಂಗ್ರಹಿಸುವಲ್ಲಿ ಈ ಬ್ಯಾಂಕುಗಳು ಎಡವಿದ್ದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು.

ಅತಿಯಾದ ಸಿಬ್ಬಂದಿ ಮತ್ತು ಆಡಳಿತ ವೆಚ್ಚಗಳು. ಹಳ್ಳಿಗಳ ಅರ್ಥವ್ಯವಸ್ಥೆಯಲ್ಲಿ ಆಸಕ್ತಿಯೇ ಇಲ್ಲದೆ ನಗರವಾಸಿ ಸಿಬ್ಬಂದಿಗಳ ನಿಯಮದಂತೆ ಕೆಲಸ ಮಾಡುವ ಪ್ರವೃತ್ತಿ, ದಿನಗಳೆದಂತೆ ಸಾಲ ವಸೂಲಾತಿಯಲ್ಲಿ ಕುಸಿತ ಮತ್ತು ದುರುದ್ದೇಶದ ಸುಸ್ತಿ ಸಾಲಗಳ ಹೆಚ್ಚಳ ಮುಂತಾದ ಕಾರಣಗಳಿಂದ ೧೯೯೦ರ ದಶಕದ ಆರಂಭದಲ್ಲಿಯೇ ಅರ್ಥಕ್ಕಿಂತ ಹೆಚ್ಚು ಬ್ಯಾಂಕುಗಳು ದೊಡ್ಡ ಗಾತ್ರದ ನಷ್ಟ ಅನುಭವಿಸಲಾರಂಭಿಸಿದ್ದವು. ಸರಿಪಡಿಸುವ ಪ್ರಯತ್ನಗಳು ವಿಫಲವಾದಾಗ ಆಗಿನಿಂದಲೇ ಅವುಗಳನ್ನು ಲಾಭದಲ್ಲಿರುವ ಬ್ಯಾಂಕುಗಳಲ್ಲಿ ವಿಲೀನ ಪ್ರಕ್ರಿಯೆ ಆರಂಭಿಸಲಾಯಿತು. ಇದರಿಂದ ೨೦೧೧ರ ಹೊತ್ತಿಗೆ ೮೨ ದೊಡ್ಡ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದವು.

ಈ ಹತ್ತು ವರ್ಷಗಳಲ್ಲಾದರೂ ಸುಧಾರಣೆ ಕಂಡು ಬರಲಿ ಎಂದು ಸರ್ಕಾರ ಹೆಚ್ವುವರಿ ಬಂಡವಾಳವನ್ನೂ ಒದಗಿಸಿತು. ಆದರೂ ಪರಿಣಾಮ ಕಾಣದಿದ್ದಾಗ ವಿಲೀನ ಮುಂದುವರಿದು ಈಗ ಪ್ರತಿ ರಾಜ್ಯಕ್ಕೆ ಒಂದು ಅಥವಾ ಎರಡರಂತೆ ಒಟ್ಟು ೪೩ ಬ್ಯಾಂಕುಗಳಾಗಿವೆ. ಈಗಲೂ ಸ್ಥಿತಿ ಸುಧಾರಿಸಿಲ್ಲ. ೨೦೧೧ರಲ್ಲಿ ಲಾಭದಲ್ಲಿದ್ದ ಬ್ಯಾಂಕುಗಳ ಸಂಖ್ಯೆ ೭೫ ಇದ್ದದ್ದು ೨೦೨೨ ಮಾರ್ಚ್ ಹೊತ್ತಿಗೆ ೩೫ಕ್ಕೆ ಇಳಿದಿದೆ. ಅದರಲ್ಲಿಯೂ ೧೫ ಕೋಟಿ ರೂ.ಗಳಿಗಿಂತ ಹೆಚ್ಚು ಲಾಭ ಗಳಿಸಿದವುಗಳು ಕೇವಲ ೨೦. ನಿವ್ವಳ ಎನ್‌ಐಪಿಗೆ (ಸುಸ್ತಿ ಸಾಲಕ್ಕೆ) ಬಂದರೆ ೨೦೧೧ರಲ್ಲಿ ಒಟ್ಟು ಸಾಲದ ಶೇ.೨.೦೫ ಇದ್ದದ್ದು ಇಂದು ಶೇ.೪.೬೮ಕ್ಕೆ ಏರಿದೆ. ಶೇ.೩ರ ಮಿತಿಯ ಅರ್ಧಕ್ಕಿಂತ ಹೆಚ್ಚು ಸುಸ್ತಿಸಾಲಗಳಿವೆ.

ಇನ್ನೊಂದು ಮಹತ್ವದ ಅಂಶವೆಂದರೆ ಗ್ರಾಮಗಳ ಜನರು ಈ ಬ್ಯಾಂಕುಗಳಲ್ಲಿ ಆಸಕ್ತಿ ಕಳೆದುಕೊಂಡು ವಾಣಿಜ್ಯ ಬ್ಯಾಂಕುಗಳತ್ತ ಹೊರಳುತ್ತಿದ್ದಾರೆ. ಒಟ್ಟು ಗ್ರಾಮೀಣ ಪ್ರದೇಶಗಳ ಸಾಂಸ್ಥಿಕ ಸಾಲಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಪಾಲು ೨೦೧೦-೧೧ರಲ್ಲಿ ಶೇ.೬೫ ಇದ್ದದ್ದು ಇಂದು ಶೇ.೭೬ಕ್ಕೆ ಏರಿದೆ. ಆಗಲೇ ಗ್ರಾಮೀಣ ಬ್ಯಾಂಕುಗಳ ಪಾಲು ಶೇ.೧೩ ಮಾತ್ರ ಇದ್ದದ್ದು ಈಗ ಶೇ.೧೧ಕ್ಕೆ ಇಳಿದಿದೆ. ಗ್ರಾಮೀಣ ಬ್ಯಾಂಕುಗಳು ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಿವೆಯೇ?

ಮುಂದೇನು?

ಈಗಲೂ ಇವುಗಳನ್ನು ಉಳಿಸಿಕೊಳ್ಳಲು ಸರ್ಕಾರ ಒಂದು ಅವಕಾಶವನ್ನು ಕಲ್ಪಿಸಿದೆ. ಇವು ತಮ್ಮ ವೃತ್ತಿಪರತೆ ಮತ್ತು ಸಾಮರ್ಥ್ಯಗಳನ್ನು ತೋರಿಸಿಕೊಂಡು ಹೂಡಿಕೆದಾರರನ್ನು ಮುಕ್ತವಾಗಿ ಆಕರ್ಷಿಸಲು ಶೇರು ಪೇಟೆಗಳಲ್ಲಿ ಶೇರುಗಳನ್ನು ವ್ಯವಹಾರಕ್ಕೆ ಪಟ್ಟೀಕರಿಸಬೇಕು. ಇದಕ್ಕೆ ಎರಡು ನಿಬಂಧನೆಗಳಿವೆ. ಒಂದು; ಬ್ಯಾಂಕಿನ ನಿವ್ವಳ ಮೌಲ್ಯ ೩೦೦ ಕೋಟಿ ರೂ. ಹೆಚ್ಚಿರಬೇಕು. ಇನ್ನೊಂದರಂತೆ ಹಿಂದಿನ ಐದು ವರ್ಷಗಳಲ್ಲಿ ಮೂರರಲ್ಲಾದರೂ ಶೇ.೧೫ ಕೋಟಿಯಷ್ಟು ಲಾಭಗಳಿಸಬೇಕು ಮತ್ತು ಸುಸ್ಥಿರ ಬಂಡವಾಳ ಪ್ರಮಾಣ ಶೇ.೯ ಇರಬೇಕು. ಇದು ಬ್ಯಾಂಕುಗಳಿಗೆ ಸವಾಲೂ ಹೌದು. ಅವಕಾಶವೂ ಹೌದು.

ಎರಡನೇ ಸಾಧ್ಯತೆ ಎಂದರೆ ಪ್ರವರ್ತಕ ಬ್ಯಾಂಕುಗಳಲ್ಲಿ ವಿಲೀನಗೊಳಿಸುವದು. ಆದರೆ, ಇಂದಿನ ಸ್ಥಿತಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ರವರ್ತಕ ಬ್ಯಾಂಕುಗಳಿವೆ. ಮೊದಲು ಅವುಗಳು ಒಪ್ಪಬೇಕು. ನಂತರ ಯಾವುದರಲ್ಲಿ ವಿಲೀನ ಆಗಬೇಕೆಂಬುದು ನಿರ್ಧಾರವಾಗಬೇಕು. ಇದು ಒಪ್ಪಿಗೆಯಾದರೆ ಮೊದಲು ನಿವೃತ್ತಿಯ ಅಂಚಿನಲ್ಲಿರುವ ನೌಕರರಿಗೆ ಮತ್ತು ಆಸಕ್ತರಿಗೆ ಸ್ವಯಂ ನಿವೃತ್ತಿ ಅವಕಾಶ ಮತ್ತು ಪ್ಯಾಕೇಜ್ ಪ್ರಕಟಿಸಬೇಕು. ಉಳಿದವರಿಗೆ ಹೊಸ ತಂತ್ರಜ್ಞಾನದಲ್ಲಿ ತರಬೇತಿ ಕೊಟ್ಟು ಸಿದ್ದಗೊಳಿಸಬೇಕು. ಈ ಎಲ್ಲ ವೆಚ್ಚಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಪಡೆಯುವ ಬ್ಯಾಂಕು ಭರಿಸಬೇಕು. ಆಗ ಪಡೆಯುವ ಬ್ಯಾಂಕಿಗೆ ಆಸ್ತಿಗಳು ಸಿಬ್ಬಂದಿ ಮತ್ತು ಗ್ರಾಹಕರ ಜೊತೆಗೆ ಒಂದಿಷ್ಟು ಜವಾಬ್ದಾರಿ ದೊರೆಯುತ್ತವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ