ವಿತ್ತ
ಭಾರತದಲ್ಲಿನ ತಮ್ಮ ಕುಟುಂಬದ ಸದಸ್ಯರ ಪರವಾಗಿ ಅನಿವಾಸಿ ಭಾರತೀಯರು ಯುಟಿಲಿಟಿ ಬಿಲ್‌ಗಳು ಮತ್ತು ಶಿಕ್ಷಣ ಶುಲ್ಕವನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿ ಮಾಡಬಹುದು. ಅನಿವಾಸಿ ಭಾರತೀಯರು ದೇಶದಲ್ಲಿರುವ ತಮ್ಮವರಿಗಾಗಿ ಬಿಲ್ ಪಾವತಿ ಮಾಡಲು ಭಾರತ್ ಬಿಲ್ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಇದು ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿ ತಮ್ಮ ಕುಟುಂಬದ ಪರವಾಗಿ ಉಪಯುಕ್ತತೆ, ಶಿಕ್ಷಣ ಮತ್ತು ಇತರ ಪಾವತಿಗಳಿಗೆ ಬಿಲ್ ಪಾವತಿಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟಣೆ ವೇಳೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.
ಭಾರತ್ ಬಿಲ್ ಪಾವತಿ ವ್ಯವಸ್ಥೆಯು (ಬಿಬಿಪಿಎಸ್) ಪ್ರಮಾಣೀಕೃತ ಬಿಲ್ ಪಾವತಿಗಳಿಗೆ ಇಂಟರ್‌ಆಪರೇಬಲ್ ವೇದಿಕೆಯಾಗಿದ್ದು, ೨೦,೦೦೦ ಕ್ಕೂ ಹೆಚ್ಚು ಬಿಲ್ಲರ್‌ಗಳು ವ್ಯವಸ್ಥೆಯ ಭಾಗವಾಗಿದ್ದಾರೆ ಮತ್ತು ಮಾಸಿಕ ಆಧಾರದ ಮೇಲೆ ೮ ಕೋಟಿಗೂ ಹೆಚ್ಚು ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್(ಖಃ) ಶೀಘ್ರದಲ್ಲೇ ಅಗತ್ಯ ಸೂಚನೆಗಳನ್ನು ನೀಡಲಿದೆ.
ವಿಜ್ಞಾನ
ಪುನಃ ಸಕ್ರಿಯಗೊಂಡ ಮೃತ ಹಂದಿಯ ಜೀವಕೋಶ, ಅಂಗಾಂಗಗಳು!
ಅಮೆರಿಕ ಸಂಶೋಧಕರು ಹೊಸ ತಂತ್ರಜ್ಞಾನವೊಂದನ್ನು ರೂಪಿಸಿದ್ದು, ಇದರ ಸಹಾಯದಿಂದ ಸತ್ತ ಪ್ರಾಣಿಗಳ ಜೀವಕೋಶಗಳು ಮತ್ತು ಅಂಗಾಂಗಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಂದಿಗಳ ಮೇಲೆ ಈ ಪ್ರೋಂಗವನ್ನು ನಡೆಸಲಾಗಿದೆ.
ತಂತ್ರಜ್ಞಾನದ ಸಹಾಯದಿಂದ ಹಂದಿಗಳು ಮೃತಪಟ್ಟ ಬಳಿಕ ಸುಮಾರು ಒಂದು ಗಂಟೆಯ ವರೆಗೆ ಅವುಗಳ ಜೀವಕೋಶಗಳು, ರಕ್ತನಾಳಗಳು, ರಕ್ತಪರಿಚಲನೆ ಮತ್ತು ಅಂಗಾಂಗಗಳು ಕಾರ್ಯಚರಣೆ ಸಾಧ್ಯವಾಗಿದೆ. ಈ ಸಂಶೋಧನೆಯಿಂದ ಶಸ್ತ್ರಚಿಕಿತ್ಸೆ ವೇಳೆ ಮನುಷ್ಯನ ಅಂಗಾಂಗಗಳ ಆರೋಗ್ಯದ ಅವಧಿ ವಿಸ್ತರಿಸಲು ಸಹಕಾರವಾಗಲಿದೆ ಮತ್ತು ದಾನವಾಗಿ ಬಂದ ಅಂಗಾಂಗಗಳ ಲಭ್ಯತೆಯನ್ನು ವಿಸ್ತರಿಸಲು ಅನುಕೂಲವಾಗಲಿದೆ ಎಂಬ ವಿಶ್ವಾಸ ಮೂಡಿದೆ.
ಎಲ್ಲ ಜೀವಕೋಶಗಳು ತಕ್ಷಣ ಸಾಯುವುದಿಲ್ಲ. ಅವುಗಳನ್ನು ದೀರ್ಘಾವಧಿ ವರೆಗೆ ವಿಸ್ತರಿಸಲು ಸಾಧ್ಯವಿದೆ. ಕೆಲವು ಜೀವಕೋಶಗಳ ಪ್ರಕ್ರಿೆುಂಯಲ್ಲಿ ಹಸ್ತಕ್ಷೇಪ ಮಾಡಬಹುದು, ನಿಲ್ಲಿಸಬಹುದು ಮತ್ತು ಅವುಗಳನ್ನು ಯಥಾಸ್ಥಿತಿಗೆ ತರಬಹುದು ಎಂದು ಯಾಲೆ ಸ್ಕೂಲ್ ಆಫ್ ಮೆಡಿಸಿನ್ನ ವಿಜ್ಞಾನಿ ಡೇವಿಡ್ ಆ?ಯಂಡ್ರಿಜೆವಿಕ್ ತಿಳಿಸಿದ್ದಾರೆ.
ವಿಶೇಷ
ಬೈಕ್‌ನಲ್ಲಿ ಯುವತಿ ಏಕಾಂಗಿಯಾಗಿ ದೇಶ ಪರ್ಯಟನೆ
ಕಾಸರಗೋಡು ಜಿಲ್ಲೆಯ ಕುಂಬಳೆಯ ಅಮೃತಾ ಜೋಶಿ (21 ವರ್ಷ) ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಏಕತೆಯನ್ನು ಸಾರಲು ಕಳೆದ ೩ ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್‌ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ. ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಸುಮಾರು ೨೨,೦೦೦ ಕಿಲೋ ಮೀಟರ್ ಸಂಚರಿಸಿ ತನ್ನ ಯಾತ್ರೆಯ ಕೊನೆಯ ಭಾಗವಾಗಿ ಬೆಂಗಳೂರು-ಶಿವಮೊಗ್ಗ ಮೂಲಕ ತಮ್ಮೂರು ಕುಂಬಳೆ ತಲುಪಿದ್ದಾರೆ. ಬೆಂಗಳೂರಿನಲ್ಲಿ ಕೆಲ ಸಂಘಟನೆಗಳು ಹಾಗೂ ಬಿಬಿಎಂಪಿ ಅಮೃತಾ ಅವರನ್ನು ಇತ್ತೀಚೆಗೆ ಸನ್ಮಾನಿಸಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಹಿರಿಯ ಉದ್ಯಮಿ ಟಿ.ವಿ. ಮೋಹನದಾಸ್ ಪೈ ಅವರು ಭಾಗವಹಿಸಲಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾಸರಗೋಡಿನ ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ತಿಳಿಸಿದ್ದಾರೆ.
ವಿಹಾರ
ಇರ್ಪು ಜಲಪಾತ
ಕೊಡಗಿನ ಜಲಪಾತಗಳಿಗೆ ಹೋಲಿಸಿದರೆ ಇರ್ಪು ಜಲಪಾತ ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನಸೆಳೆಯುತ್ತದೆ. ಈ ಜಲಪಾತ ಅತಿ ಎತ್ತರದಿಂದ ಎರಡು ಹಂತದಲ್ಲಿ ಇಳೆಯೆಡೆಗೆ ಧುಮುಕಿ ಬಳಿಕ ಚಿಕ್ಕಾತಿಚಿಕ್ಕ ಜಲಧಾರೆಗಳಾಗಿ ಹರಿಯುವಾಗ ಕಂಗೊಳಿಸುವ ದೃಶ್ಯ ಸುಂದರ, ರಮಣೀಯ.
ಬೇಸಿಗೆಯಲ್ಲಿ ತನ್ನ ಸೌಂದರ್ಯ ಕಳೆದುಕೊಳ್ಳುವ ಈ ಜಲಪಾತ, ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆಸುರಿಯುವಾಗ ಭೋರ್ಗರೆದು ಧುಮುಕುವ ರುದ್ರರಮಣೀಯ ದೃಶ್ಯ ನೋಡುಗರ ಮನಪಟಲದಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ. ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಪಾತವನ್ನು ನೋಡಲು ಬರುವವರು ಮಡಿಕೇರಿ ಕಡೆಯಿಂದ ಬರುವುದಾದರೆ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಬಂದರೆ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಇರ್ಪುಗೆ ಬಂದರೆ ಅಲ್ಲಿನ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿದೆ.
ಜಲಪಾತ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಅಲ್ಲಿಂದ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ.