Light
Dark

ಆಂದೋಲನ ಓದುಗರ ಪತ್ರ : 13 ಬುಧವಾರ 2022

ನೊಂದವರ ನೆರವಿಗೆ ಧಾವೀಸೋಣ!

ರಾಜ್ಯದಲ್ಲಿ ವರ್ಷಧಾರೆಯ ಮಹಾಮಳೆ

ಎಡಬಿಡದೆ ಸುರಿಯುತ್ತಿದೆ ಇಳೆಗೆ ಮಳೆ.

ಭೂಕುಸಿತ ರಸ್ತೆ ಮನೆ ಧ್ವಂಸದಿಂದ ಎಲ್ಲವೂ ನಾಶ

ನೊಂದವರ ಮೊಗದಲ್ಲಿ ಕಳೆಗುಂದಿದೆ ಮಂದಹಾಸ.

ಜನರ ನೆರವಿಗೆ ತುರ್ತಾಗಿ ಸ್ಪಂದಿಸಬೇಕಿದೆ ಸರ್ಕಾರ.

ಸರ್ಕಾರದ ಜೊತೆಗೆ ಇರಲಿ ದಾನಿಗಳ ಸಹಕಾರ!

ಸೂರು ಕಳೆದುಕೊಂಡವರಿಗೆ ಹೇಳೋಣ ಸಾಂತ್ವಾನ.

ನೊಂದವರಿಗೆ ನೆರವಾಗಿ ಮಾನವೀಯತೆ ಮೆರೆಯೋಣ.

-ಹರಳಹಳ್ಳಿಪುಟ್ಟರಾಜು, ಪಾಂಡವಪುರ.


ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ

ಮೈಸೂರು ಜಿಲ್ಲೆ. ಹೆಚ್ ಡಿ ಕೋಟೆ ತಾಲ್ಲೂಕಿಗೆ ಸೇರಿದ ಹೈರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಾಲಾರಕಾಲೋನಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಿ.

-ಸಿದ್ದಲಿಂಗೆಗೌಡ, ಹೈರಿಗೆ ಗ್ರಾಮ ಹೆಚ್ ಡಿ ಕೋಟೆ ತಾಲ್ಲೂಕು.


ಸುಲಿಗೆ ತಪ್ಪಿಸಿ

ಪಿರಿಯಾಪಟ್ಟಣದ ಮುಖ್ಯರಸ್ತೆಯ ಕನ್ನಂಬಾಡಿಯಮ್ಮ ದೇವಾಲಯದ ಪಕ್ಕದಲ್ಲಿನ ಪೆಟ್ರೋಲ್ ಬಂಕ್ ಜತೆಗೆ ಎಸ್ ಬಿ ಎಂ ಶಾಖೆಯ ಎಟಿಎಂ ಕೇಂದ್ರದ ಪಕ್ಕ ಲಕ್ಷ್ಮಿಪ್ರಿಯ ಎನ್ನುವ ಗ್ರಾಹಕರ ಸೇವಾ ಕೇಂದ್ರವಿದೆ. ಇಲ್ಲಿ ಗ್ರಾಹಕರಿಗೆ ಸರ್ಕಾರದ ಹಲವು ಮಹತ್ವದ ಯೋಜನೆಗಳಾದ ಸಂಧ್ಯಾ ಸುರಕ್ಷ, ವೃದ್ಧಾಪ್ಯ ವೇತನಕ್ಕೆ, ವಿಧವಾ ವೇತನಕ್ಕೆ ಅರ್ಜಿ ಆರ್ಧಾರ್ ಬ್ಯಾಂಕಿಂಗ್, ಆಧಾರ್ ತಿದ್ದುಪಡಿ, ಪಾನ್ ಕಾರ್ಡ್, ಮೊಬೈಲ್ ಫೋನ್ ನಂಬರ್ ಜೋಡಣೆ ಮತ್ತಿತರ ಕೆಲಸಗಳಿಗೆ ಅನಕ್ಷರಸ್ಥ ಗ್ರಾಹಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡಲಾಗುತ್ತಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು.

-ಎ ಎಸ್ ಗೋವಿಂದೇಗೌಡ, ಅರೇನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು


ಅನಧಿಕೃತ ಮದ್ಯದಂಗಡಿಗಳು ಬಂದ್ ಆಗಲಿ!

ಕೆಲವು ದಿನಗಳ ಹಿಂದೆ ಚಾಮುಂಡೇಶ್ವರಿಕ್ಷೇತ್ರದ ಶಾಸಕರಾದ ಜಿ ಟಿ ದೇವೆಗೌಡ ಅವರು ಹಳ್ಳಿಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ, ಇದರಿಂದ ಹಳ್ಳಿಯಲ್ಲಿ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳ ಗಮನ ಸೆಳೆದಿರುವುದು ಒಳ್ಳೆಯ ಬೆಳವಣಿಗೆ. ಕಾನೂನು ಬಾಹಿರ ಮದ್ಯ ಮಾರಾಟದಿಂದ ಹಳ್ಳಿಯ ಜನರು ಹೀನಾಯ ಸ್ಥಿತಿಗೆ ತಲುಪಿದ್ದಾರೆ. ಸಂಜೆವರೆಗೂ ದುಡಿದ ಕೂಲಿ ಹಣವನ್ನು ಮದ್ಯದಂಗಡಿಗೆಕೊಟ್ಟು ಬರಿಗೈಲಿ ಮನೆಗೆ ಹೋಗುವುದಲ್ಲದೆ ಮನೆಯಲ್ಲಿ ಹೆಂಡತಿ – ಮಕ್ಕಳೊಂದಿಗೂ ಕೂಡ ಜಗಳ ಆಡುವ ಸಂದರ್ಭಗಳೇ ಹೆಚ್ಚು. ಕೂಲಿ ಸಿಗದ ದಿನ ಸಾಲ ಮಾಡಿ ಅಥವಾ ಮನೆಯಲ್ಲಿರೊ ವಸ್ತುಗಳನ್ನ ಮಾರಿಯಾದರೂ ಮದ್ಯಪಾನ ಮಾಡುವವರಿಗೇನುಕಮ್ಮಿಇಲ್ಲ. ಲೈಸೆನ್ಸ್ ಇರುವ ಬಾರ್‌ಗಳಲ್ಲಿ ಮದ್ಯ ಮಾರಾಟ ಮಾಡಲಿ. ಈ ವಿಷಯ ಕೇವಲ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಮಾಡಿದರೆ ಸಾಲದು, ಸರ್ಕಾರವೂ ಕೂಡ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅತಿ ಅವಶ್ಯವಾಗಿದೆ.

-ಸೋಮಶೇಖರ ಯುಟಿ, ಮೈಸೂರು.


ಕೊಡಗನ್ನು ಉಳಿಸಿ

ಇತ್ತೀಚೆಗೆ ಕಂದಾಯ ಸಚಿವರು ಕೊಡಗಿನಲ್ಲಿರುವ ಸರ್ಕಾರಿ ಭೂಮಿಯನ್ನು ಧೀರ್ಘಾವಧಿಗೆ ಗುತ್ತಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಣಯವಾಗಿರುವ ಬಗ್ಗೆ ತಿಳಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದ್ದಾರೆ. ಈ ರೀತಿ ಸರ್ಕಾರಿ ಭೂಮಿಯನ್ನು ಯಾರು ಪಡೆಯುತ್ತಾರೆ ? ಹಾಲಿ ಇರುವ ಭೂ ಒಡೆಯರು , ಪ್ರಭಾವಿಗಳು, ರಾಜಕಾರಣಿಗಳ ಸಂಬಂಧಿಗಳು, ಅಧಿಕಾರಿಗಳ ಆಪ್ತರು ಕಬಳಿಸುವ ಸಾದ್ಯತೆ ಹೆಚ್ಚು. ಇನ್ನು ಯಾವ ಸರಕಾರಿ ಜಮೀನು ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಲ್ಪ ಸ್ವಲ್ಪ ಉಳಿದಿರುವ ಹಸಿರನ್ನು ಹಂಚಿ ಕೊಡಗನ್ನು ಹಸಿರು ಮುಕ್ತ ಮಾಡುವುದು ಸರಿಯೆ? ಈಗಾಗಲೆ ಅಭಿವೃದ್ಧಿ ಹೆಸರಲ್ಲಿ ಕೊಡಗು ತತ್ತರಿಸಿದೆ, ಭೂ ಕುಸಿತ, ಅಂತರ್ಜಲ ಕೊರತೆ ಕಾಡುತ್ತಿದೆ, ಕರ್ನಾಟಕದ ಸ್ವಿಟ್ಜರ್ಲ್ಯಾಂಡ್ ತನ್ನ ಮೂಲಸ್ವರೂಪ ಹಾಗೇ ಉಳಿಸಿ ಕೊಳ್ಳಲು ಬಿಡಿ, ಪ್ರಕೃತಿ ಯ ಮೇಲಿನ ಅತ್ಯಾಚಾರ ಕೈ ಬಿಡಿ,

-ಮನೋಹರ್, ಅಂಬರ ಜನಪರ ವೇದಿಕೆ, ಮೈಸೂರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ