ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಏರಿಕೆ ಮಾಡುವ ಕ್ರಮಗಳು ಐದರಿಂದ ಆರು ತ್ರೈಮಾಸಿಕಗಳ ನಂತರವಷ್ಟೇ ಪರಿಣಾಮ ಬೀರುತ್ತದೆ ಎಂದು ಆರ್ ಬಿ ಐ ಹಣಕಾಸು ನೀತಿ ಸಮಿತಿ (ಎಂ ಪಿ ಸಿ) ಸದಸ್ಯ ಜಯಂತ್ ಆರ್ ವರ್ಮಾ ಹೇಳಿದ್ದಾರೆ. ಹಣದುಬ್ಬರ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ ಏಕೆಂದರೆ ನಾವು ಹಣಕಾಸು ನೀತಿಯನ್ನು ಬಿಗಿಗೊಳಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





