Mysore
18
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಹಾಡಹಗಲೇ ರಸ್ತೆಯಲ್ಲಿ ಕಾಡಾನೆಗಳ ಆರ್ಭಟ: ರಸ್ತೆ ಮಾರ್ಗಕ್ಕೆ ಕಾಲಿಟ್ಟ ಕಾಡಾನೆಗಳು, ಗ್ರಾಮಸ್ಥರಲ್ಲಿ ಆತಂಕ

ಹನೂರು:  ಪಟ್ಟಣದಿಂದ ಅಜ್ಜಿಪುರ- ರಾಮಾಪುರ ರಸ್ತೆಯ ಮಾರ್ಗ ಮಧ್ಯದ ಅರಕನಹಳ್ಳ ಬಳಿ  ಹಾಡಹಗಲೇ ಕಾಡು ಆನೆಗಳು ರಸ್ತೆ ಸಮೀಪವೆ ಆಗಮಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಆಗಮಿಸಿದ 5 ಕಾಡಾನೆಗಳು ರಸ್ತೆಯನ್ನು ದಾಟಿದ್ದು, ಈ ಸಮಯದಲ್ಲಿ ಎರಡೂ ಬದಿಗಳಲ್ಲಿ ಬೈಕ್ ಸವಾರರು ಹಾಗೂ ವಾಹನಗಳಲ್ಲಿದ್ದವರು ಕುತೂಹಲದಿಂದ ವಿಡಿಯೋ ಮಾಡಿದ್ದಾರೆ. ಇನ್ನೂ ಕೆಲವರು ಆತಂಕದಲ್ಲಿ ಆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ಸಂಬಂಧ ಅಜ್ಜಿಪುರ ಗ್ರಾಮದ ನಿವಾಸಿಗಳು ಮಾತನಾಡಿ, ಹಾಡಹಗಲೇ ಕಾಡಾನೆಗಳು ಮುಖ್ಯ ರಸ್ತೆಯಲ್ಲಿ ಓಡಾಡಿರುವುದು ಭಯ ಉಂಟುಮಾಡಿದೆ.  ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಸೇರಿದಂತೆ ಇನ್ನಿತರ ಪ್ರಾಣಿಗಳು ರಸ್ತೆ ಭಾಗಕ್ಕೆ ಬಾರದಂತೆ ಸೂಕ್ತ ಕ್ರಮ ವಹಿಸಬೇಕು  ಎಂದು ಮನವಿ ಮಾಡಿದ್ದಾರೆ.

Tags:
error: Content is protected !!