ಮಂಡ್ಯ : ಸತತವಾಗಿ ಸುರಿದ ಬಾರೀ ಮಳೆಯಿಂದಾಗಿ ಸಕ್ಕರೆ ನಾಡು ಮಂಡ್ಯ ತತ್ತರಿಸಿ ಹೋಗಿದೆ. ಇಲ್ಲಿಯ ನಾಗಮಂಗಲ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡಿದ್ದು, ಬಸ್ ನಿಲ್ದಾಣದ ಬದಲಾಗಿ ನೀರು ನಿಲ್ದಾಣವಾಗಿ ಮಾರ್ಪಟ್ಟಿದೆ.
ನಾಗಮಂಗಲ ಬಸ್ ನಿಲ್ದಾಣದಲ್ಲಿ ಸುಮಾರು 20ಕ್ಕೂ ಅಧಿಕ ಬಸ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಡಿಪೋದಲ್ಲಿರೋ ಕೆಎಸ್‍ಆರ್‌ಟಿಸಿ ಕಚೇರಿಯೂ ಮುಳುಗಡೆಯಾಗಿದ್ದು, ಸಿಬ್ಬಂದಿ ತೆಪ್ಪದಲ್ಲಿ ಕಡತಗಳನ್ನು ಹೊತ್ತುತಂದಿದ್ದಾರೆ.
ನದಿಯ ಭೋರ್ಗರೆತಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಮುಂಭಾಗವಿರುವ ಮದ್ವವನ ಕೊಚ್ಚಿ ಹೋಗಿದೆ. ಅಲ್ಲದೆ ಇದೀಗ ಮತ್ತಷ್ಟು ಭಾಗ ಕುಸಿಯುವ ಭೀತಿಯಲ್ಲಿದೆ.