Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಆ.12 ರಂದು ʼವರ್ಣದಿಂದ ವಿಶ್ವದೆಡೆಗೆʼ ಕೃತಿ ಲೋಕಾರ್ಪಣೆ

ಮೈಸೂರು : ಗಾಯಿತ್ರಿ ಎಂಟರ್‌ ಪ್ರೈಸಸ್‌ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಮೈಸೂರು ಇವರುಗಳ ವತಿಯಿಂದ ಹಿರಿಯ ಕಲಾವಿದರೂ ಹಾಗೂ ಛಾಯಾಚಿತ್ರ ಪತ್ರಕರ್ತರೂ ಆದ ಎಸ್‌. ಎಂ. ಜಂಬುಕೇಶ್ವರ ಅವರು ರಚಿಸಿರುವ ʼವರ್ಣದಿಂದ ವಿಶ್ವದೆಡೆಗೆʼ ಕೃತಿಯನ್ನು  ಆ. 12 ರಂದು ( ಶುಕ್ರವಾರ) ಲೋಕಾರ್ಪಣೆ ಮಅಡಲಾಗುತ್ತಿದೆ.

ಕೃತಿ ಬಿಡುಗಡೆ ಕಾರ್ಯಕ್ರಮವು ನಗರದ ಜೆ ಎಸ್‌ ಎಸ್‌ ಆಸ್ಪತ್ರೆಯ ಆವರಣದಲ್ಲಿರುವ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

 

ʼವರ್ಣದಿಂದ ವಿಶ್ವದೆಡೆಗೆʼ ಕೃತಿಯು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್‌ ಅವರು ಬಿಡುಗಡೆಗೊಳಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ಹಾಗೂ ಮಾಜಿ ಸಚಿವರಾದ ಜಿ.ಟಿ,ದೇವೇಗೌಡ ರವರು  ವಹಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ  ಹಿರಿಯ ಪತ್ರಕರ್ತರಾದ ಡಾ. ಎಂ. ಮಹ್ಮದ್‌ ಭಾಷ ರವರು ಕೃತಿ ಪರಿಚಯ ಮಾಡಲಿದ್ದಾರೆ.ಪ್ರಾಸ್ತಾವಿಕ ನುಡಿಗಳನ್ನು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಎಂ.ಚಂದ್ರಶೇಖರ್‌ ಅವರು ಆಡಲಿದ್ದಾರೆ.

ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಾಶಕರಾದ ಎಂ.ಎನ್‌. ಕಾರ್ತಿಕ್‌ ಅವರು ತಿಳಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ