ಮೈಸೂರು: ಕ್ಷುಲ್ಲಕ ಕಾರಣಕ್ಕೆ ತಂದೆ ಮಗನನ್ನೆ ಕೊಂದ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.
ತಂದೆ ಮಗನ ಮಧ್ಯೆ ಮೊಬೈಲ್ ವಿಚಾರವಾಗಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಾವಗಿದೆ. ಉಮೇಜ್(23) ತನ್ನ ತಾಯಿಯ ಮೊಬೈಲ್ ಬಳಸುತ್ತಿದ್ದ. ಇದನ್ನು ಸಹಿಸದ ತಂದೆ ಅಸ್ಲಂ ಪಾಷಾ ತಾಯಿಯ ಮೊಬೈಲ್ ಮುಟ್ಟದಂತೆ ಹೇಳಿದ್ದಾನೆ.
ಅನುಮತಿ ಇಲ್ಲದೆ ತಾಯಿಯ ಮೊಬೈಲ್ ಬಳಸದಂತೆ ತಂದೆ ಅಸ್ಲಂ ಪಾಷಾ ತಾಕೀತು ಮಾಡಿದ್ದಾನೆ. ಮಾತಿಮಾತು ಬೆಳೆದು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಈ ಮಧ್ಯೆ ತಂದೆ ಅಸ್ಲಂ ಪಾಷಾ ಮಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮಗನನ್ನು ಕೊಲೆ ಮಾಡಿದ ಬಳಿಕ ಆರೋಪಿ ತಂದೆ ಅಸ್ಲಂ ಪಾಷಾ ಎನ್.ಆರ್. ಠಾಣೆಗೆ ಬಂದು ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿ ಸರೆಂಡರ್ ಆಗಿದ್ದಾನೆ, ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.