ವಿರಾಜಪೇಟೆ: ಸಾಲಬಾಧೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ತಾಲ್ಲೂಕಿನ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದ ನಿವಾಸಿ ಪಿ.ಕೆ.ನಾಣಿಯಪ್ಪ ಎಂಬವರ ಪುತ್ರ ಮತ್ತು ಮುತ್ತೊಟ್ ಫೈನಾನ್ಸ್ ನಾಪೊಕ್ಲು ಶಾಖೆಯ ಮಾಜಿ ವ್ಯವಸ್ಥಾಪಕರಾಗಿದ್ದ ಪಿ.ಎನ್.ಸತೀಶ್(47) ಆತ್ಮಹತ್ಯೆ ಮಾಡಿಕೊಂಡವರು.
ಇವರು ಮಡಿಕೇರಿ ತಾಲ್ಲೂಕಿನ ನಾಪೊಕ್ಲು ಫೈನಾನ್ಸ್ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಸೇವೆಯಲ್ಲಿ ಸಲ್ಲಿಸುತ್ತಿದ್ದರು. ನಂತರದಲ್ಲಿ ಕೆಲಸದ ಒತ್ತಡದಿಂದ ಸೇವೆಗೆ ರಾಜೀನಾಮೆ ನೀಡಿದ್ದರು. ಮೃತರ ಪತ್ನಿ ಪಿ.ಎಸ್.ಬಿಂದು, ಮಗ ಶಬೀನ್ ಇದ್ದಾರೆ. ಮೃತರ ತಂದೆ ನಾಣಿಯಪ್ಪ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.