ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ಕಾಫಿತೋಟವೊಂದರಲ್ಲಿ ಸುಮಾರು 14 ವರ್ಷದ ಹುಲಿಯ ಕಳೇಬರ ಪತ್ತೆಯಾಗಿದೆ.
ತೋಟದ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್‌ಎಫ್‌ಒ ಶಂಕರಪ್ಪ, ಡಿಆರ್‌ಎಫ್‌ಓ ದಿವಾಕರ್, ತಿತಿಮತಿ ವಲಯ ಡಿಆರ್‌ಎಫ್‌ಓ ರವಿಕಿರಣ್, ಚೇತನ್, ಕಲ್ಲಳ್ಳ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ನಿತ್ರಾಣಗೊಂಡ ಕಾರಣ ಹುಲಿ ಸಾವಿಗೀಡಾಗಿರಬಹುದು ಎಂಬ ಶಂಕೆ ಈ ವೇಳೆ ವ್ಯಕ್ತವಾಗಿದೆ.





