Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ನಾಗರಹೊಳೆಯಲ್ಲಿ ಹುಲಿ ಗಣತಿ ಕಾರ್ಯ ಆರಂಭ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ  ಫೆ.6 ರವರೆಗೆ ಎಂಟು ದಿನಗಳ ಕಾಲ ಹುಲಿಗಣತಿ ಕಾರ್ಯ ನಡೆಯಲಿದೆ.

ಮೈಸೂರು :  ವೀರನಹೊಸಹಳ್ಳಿ ವಲಯ ಕಚೇರಿಯಲ್ಲಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದರ ನೇತೃತ್ವದಲ್ಲಿ ಬೆಂಗಳೂರಿನ ಟೈಗರ್‌ಸೆಲ್‌ನ ವಿನಯ್ ಹಾಗೂ ಡಿಆರ್‌ಎಫ್‌ಓ ನಂದನ್ ತರಬೇತಿ ನೀಡಿದರು.

ಮಾಹಿತಿ ನೀಡಿದ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದ ಮೊದಲ ಮೂರು ದಿನ ಮಾಂಸಹಾರಿ ಹಾಗೂ ದೊಡ್ಡ ಪ್ರಾಣಿಗಳ ಸಮೀಕ್ಷೆ ನಡೆಸಿ ಎಕಾಲಾಜಿಕಲ್ ಆಫ್‌ನಲ್ಲಿ ದಾಖಲಿಸಬೇಕು.

ನಂತರ ಮೂರುದಿನ ಲೈನ್ ಟ್ರಾಂಜ್ಯಾಕ್ಟ್ ಮೂಲಕ ಪ್ರತಿ ಭೀಟ್‌ನಲ್ಲಿ ಸುಮಾರು1-2 ಕಿ.ಮೀವರೆಗೆ ಸಸ್ಯಹಾರಿ ಪ್ರಾಣಿಗಳ ಸರ್ವೆ, ಮರಗಿಡ, ಗಿಡಮೂಲಿಕೆ ಸಸ್ಯ ಪ್ರಬೇಧಗಳ ಮಾಹಿತಿ ಸಂಗ್ರಹಣೆ, ಸಸ್ಯಹಾರಿ ಪ್ರಾಣಿಗಳ ಹಿಕ್ಕೆಗಳ ಪರಿವೀಕ್ಷಣೆ ನಡೆಸಲಾಗುವುದು.

ಏಳನೇದಿನ ರಣಹದ್ದುಗಳ ಸಮೀಕ್ಷೆ ನಡೆಸಲಾಗುವುದು. ಕೊನೆಯ ದಿನ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಿ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು. ಉದ್ಯಾನದ 8 ವಲಯಗಳ 91 ಬೀಟ್‌ನಲ್ಲಿ ಗಣತಿ ಕಾರ್ಯ ನಡೆಯಲಿದ್ದು, ಗಣತಿ ಕಾರ್ಯದಲ್ಲಿ ಸಂಪೂರ್ಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ತೊಡಗಿಸಿಕೊಳ್ಳಲಿದ್ದಾರೆ, ಯಾವುದೇ ಸ್ವಯಂಸೇವಕರನ್ನು ಈ ಕಾರ್ಯಕ್ಕೆ ಬಳಸಿಕೊಂಡಿಲ್ಲವೆಂದು ಡಿಸಿಎಫ್ ಮಾಹಿತಿ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!