Mysore
24
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಎಚ್‌ಸಿಎಂ ಪುತ್ರನ ಮನೆಯಲ್ಲಿ ನಾಯಿ ಮರಿಗಳ ಕಳ್ಳತನ

ಮೈಸೂರು: ಮನೆಯಲ್ಲಿ ಸಾಕುತ್ತಿದ್ದ ನಾಯಿ ಮರಿಗಳನ್ನು ಕಳ್ಳತನ ಮಾಡಿರುವ ಪ್ರಕರಣ ವಿಜಯನಗರ ಎರಡನೇ ಹಂತದಲ್ಲಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರ ಮನೆಯಲ್ಲಿ ನಡೆದಿದೆ.

ಎರಡನೇ ಹಂತದಲ್ಲಿರುವ ನಿವಾಸದಲ್ಲಿ ಮಂಗಳವಾರ ಮುಂಜಾನೆ ೬.೩೦ರ ಸಮಯದಲ್ಲಿ ತಾಯಿ ಮತ್ತು ಎರಡು ಮರಿಗಳು ಕಾಣೆಯಾಗಿದ್ದು, ಯಾರೋ ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ ನಾಯಿಗಳಿಗೆ ಆಹಾರ ನೀಡಿ ಕಟ್ಟಿಹಾಕಲಾಗಿತ್ತು. ಮುಂಜಾನೆ ಎದ್ದು ನಾಯಿಯನ್ನು ವಾಕಿಂಗ್ ಮಾಡಿಸಲು ನೋಡಿದಾಗ ಕಾಣಿಸಲಿಲ್ಲ. ನಂತರ, ಅಕ್ಕಪಕ್ಕದ ಮನೆಗಳು,ಬೀದಿ, ಬಡಾವಣೆಯ ಪಾರ್ಕ್‌ನಲ್ಲಿ ಹುಡುಕಾಡಿದರೂ ಸಿಕಿಲ್ಲ. ಹೀಗಾಗಿ,ನಾಯಿಗಳನ್ನು ಕಳ್ಳತನಮಾಡಿರಬಹುದೆಂದು ಶಂಕಿಸಲಾಗಿದೆ.

ಬಿಳಿ ಬಣ್ಣದಲ್ಲಿರುವ ತಾಯಿ ನಾಯಿ, ಕಪ್ಪು ಬಣ್ಣದ ಒಂದು ಹೆಣ್ಣು,ಒಂದು ಗಂಡು ಕಾಣೆಯಾಗಿರುವ ಕಾರಣ ಸಿಕ್ಕಿದಲ್ಲಿ ದೂರವಾಣಿ ಸಂಖ್ಯೆ 9972948453  ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಕೋರಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!