Mysore
24
broken clouds

Social Media

ಬುಧವಾರ, 26 ಮಾರ್ಚ್ 2025
Light
Dark

ಹದಿನಾರು ಕೆರೆಯಲ್ಲಿ ಹೆಬ್ಬಾತುಗಳ ಕಲರವ

ಮೈಸೂರು: ಮೊದಲ ಬಾರಿಗೆ ಕರ್ನಾಟಕದಲ್ಲಿ ಲೆಸ್ಸರ್ ವೈಟ್ ಫ್ರಾಂಟೆಡ್ ಗೂಸ್ ಮತ್ತು ಗ್ರೇಟರ್ ವೈಟ್ ಫ್ರಾಂಟೆಡ್ ಗೂಸ್ ಎಂಬ ಹೆಬ್ಬಾತುಗಳು ವಲಸೆ ಬಂದಿರುವುದು ಈ ಬಾರಿ ದಾಖಲಾಗಿದ್ದು, ನಂಜನಗೂಡಿನ ಹದಿನಾರು ಕೆರೆಯಲ್ಲಿ ಈ ಹಕ್ಕಿಗಳನ್ನು ಗುರುತಿಸಿ ವನ್ಯಜೀವಿ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಅವುಗಳ ಚಿತ್ರವನ್ನು ಸೆರೆಹಿಡಿದಿದ್ದಾರೆ.


ದೂರದ ಯುರೋಪ್, ಮಂಗೋಲಿಯಾ ಹಾಗೂ ಸೈಬೀರಿಯಾ ಮೂಲದಿಂದ ಈ ಹಕ್ಕಿಗಳು ಪಟ್ಟೆತಲೆ ಹೆಬ್ಬಾತುಗಳೊಂದಿಗೆ ಭಾರತಕ್ಕೆ ಬರುತ್ತವೆ. ಆದರೆ ಈ ಬಾರಿ ವಿಶೇಷವಾಗಿ ವನ್ಯಜೀವಿ ಛಾಯಾಗ್ರಾಹಕರು ನಂಜನಗೂಡಿನ ಹದಿನಾರು ಕೆರೆಯಲ್ಲಿ ಲೆಸ್ಸರ್ ವೈಟ್ ಫ್ರಾಂಟೆಡ್ ಗೂಸ್ ಮತ್ತುಗ್ರೇಟರ್ ವೈಟ್ ಫ್ರಾಂಟೆಡ್ ಗೂಸ್ ಎಂಬ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಹೆಬ್ಬಾತುಗಳನ್ನು ಈ ಬಾರ್ ಹೆಡೆಡ್ ಗೂಸ್ ಹಕ್ಕಿಗಳ ಮಧ್ಯೆ ಗುರುತಿಸಿ ಅದರ ಚಿತ್ರವನ್ನು ಸೆರೆಹಿಡಿದಿದ್ದಾರೆ.

ಮೈಸೂರಿನ ಪಕ್ಷಿ ವೀಕ್ಷಕ ಸ್ನೇಕ್ ಶಿವು, ಮತ್ತು ಎಚ್.ಎಸ್.ಸುರೇಂದ್ರ ಎಂಬವರು ಈ ಅಪರೂಪದ ಹಕ್ಕಿಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ