ಎಚ್.ಡಿ.ಕೋಟೆ: ಪಟ್ಟಣದ ಹೌಸಿಂಗ್ ಹೌಸಿಂಗ್ ಬೋರ್ಡ್ ಕಾಲೋನಿ ಸಮೀಪ ಉದ್ಯಾನಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಮಂಗಳವಾರ ರಾತ್ರಿ ಪಾರ್ಕಿಂಗ್ ಒಳಗಿದ್ದ ಭಾರೀ ಗಾತ್ರದ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿ ಮೇಲ್ಭಾಗದ ಮರಗಳನ್ನು ಬಿಸಾಡಿ ಅದರ ಕೆಳಭಾಗದಲ್ಲಿರುವ ಲಕ್ಷಾಂತರ ರೂ. ಬೆಲೆ ಬಾಳುವ ಮರದ ತುಂಡುಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಬುಧವಾರ ಬೆಳಿಗ್ಗೆ ಅಕ್ಕಪಕ್ಕದ ನಿವಾಸಿಗಳು ಕಳ್ಳತನವಾಗಿರುವ ಗಂಧದ ಮರವನ್ನು ನೋಡಿ ಆತಂಕಗೊಂಡು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ವಿಚಾರ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.