Mysore
22
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

‘ದೇಗುಲದ ಎದುರು ವೇದಿಕೆ ನಿರ್ಮಾಣ ಬೇಡ’

ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಮಧ್ಯೆ ಭಾಗದಲ್ಲಿರುವ ದೇವಸ್ಥಾನದ ಮುಂದೆ ಸಂಘದ ಹೆಸರಿನಲ್ಲಿ ವೇದಿಕೆ ನಿರ್ಮಾಣ ಮಾಡುತ್ತಿದ್ದು , ಇದರಿಂದ ವಾಲಿ ಸುಗ್ರೀವರ ದೇವಾಲಯ ಕಾಣದಂತಾಗುತ್ತದೆ. ದೇವರ ಕಾರ್ಯ ಮೆರವಣಿಗೆ , ಚಪ್ಪರ ಹಾಕಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮದ ಮುಖಂಡರಾದ ಗೋಪಾಲ್ ಮತ್ತು ಇತರರು ಪೊಲೀಸ್ ಠಾಣೆ ಮತ್ತು ಗ್ರಾಪಂಗೆ ದೂರು ನೀಡಿದ್ದಾರೆ.

ನವಗ್ರಹ ದೇವಾಲಯದ ಗೋಪುರದ ಮೇಲೆ ಕಬ್ಬಿಣದ ಪೈಪ್ ಹಾಕಿ ಶೀಟ್ ಹಾಕಿ ಶಾಶ್ವತ ವೇದಿಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಗ್ರಾ.ಪಂ ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!