ಶಿಕ್ಷಕಿಯೊಬ್ಬರಿಗೆ ಅದೇ ಯುವಕನೋರ್ವ ಪ್ರೀತಿಸಿ, ಮದುವೆಯಾಗಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಜಾತಿ ಕಾರಣವೊಡ್ಡಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂಲತಃ ನಂಜನಗೂಡಿನ ನಿವಾಸಿಯಾಗಿರುವ ರಮ್ಯಾಶ್ರೀ ಮಳವಳ್ಳಿಯ ತನ್ನ ಅಜ್ಜಿ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮುಗಿಸಿ ಸದ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅದೇ ಊರಿನ ಮಂಜು ಎಂಬಾತ ಎಂಟು ವರ್ಷದಿಂದ ತನ್ನನ್ನು ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಮಂಜು ಮನೆ ಮುಂದೆ ಮಧ್ಯರಾತ್ರಿ ಯುವತಿ ಧರಣಿ ಕುಳಿತಿದ್ದಾರೆ. ಬಳಿಕ ಬೆಳಗ್ಗೆ ಮಂಜು ಮನೆಯವರು ರಮ್ಯಾಶ್ರೀ ಮೇಲೆ ಹಲ್ಲೆ ನಡೆಸಿದ್ದು, ಎರಡೂ ಮನೆಗಳ ನಡುವೆ ವಾಗ್ವಾದ ನಡೆದಿದೆ. ಈ ಗಲಾಟೆಯಲ್ಲಿ ಗಾಯಗೊಂಡಿರುವ ಮಂಜುಶ್ರೀ ಸದ್ಯ ಮಂಡ್ಯ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸ್ ದೂರನ್ನೂ ಸಹ ದಾಖಲಿಸಲು ರಮ್ಯಾಶ್ರೀ ಮುಂದಾಗಿದ್ದಾರೆ.





