Mysore
23
overcast clouds

Social Media

ಶನಿವಾರ, 20 ಜೂನ್ 2026
Light
Dark

ಮುಡಾ ಅಧ್ಯಕ್ಷರಾಗಿ ಯಶಸ್ವಿ ಎಸ್.ಸೋಮಶೇಖರ್ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ, ಮೈಸೂರು ನಗರ ಬಿಜೆಪಿ ಮಾಜಿಪ್ರಧಾನ ಕಾರ್ಯದರ್ಶಿ ಯಶಸ್ವಿ ಎಸ್. ಸೋಮಶೇಖರ್ ಅವರು ಇಂದು  ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದು ನೇರವಾಗಿ ಮುಡಾ ಕಚೇರಿಗೆ ಆಗಮಿಸಿ  ಮುಡಾ ಕಚೇರಿ ಮುಂಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಧ್ಯಕ್ಷರ ಕೊಠಡಿಗೆ ಆಗಮಿಸಿ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ   ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಿ.ಮಾದೇಗೌಡ,ತೋಂಟದಾರ್ಯ, ಮುಡಾ ಸದಸ್ಯರಾದ ಜಿ.ಲಿಂಗಯ್ಯ, .ಲಕ್ಷ್ಮೀದೇವಿ, ಕೆ.ಮಾದೇಶ್, ಎಂ.ಎನ್.‌ನವೀನ್ ಕುಮಾರ್, ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಎಲ್.ಜಗದೀಶ್,ಚಿಕ್ಕವೆಂಕಟು,  ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್,ಮುಖಂಡ ಎಸ್.ಸಿ.ಅರವಿಂದ್,ಎಂ.ಆರ್.ಬಾಲಕೃಷ್ಣ, ಮೈಸೂರು ನರಸಿಂಹರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸ್ಚಾಮಿಗೌಡ ಮುಂತಾದವರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!