Mysore
25
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

ಮೌಢ್ಯ ಆಚರಣೆಯಿಂದಾಗಿ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ : ಸುಭಾಷ್ ಮಾಡ್ರಹಳ್ಳಿ

ಗುಂಡ್ಲುಪೇಟೆ : ಆಧುನಿಕ ಸಂಧರ್ಭದಲ್ಲೂ ನಾವು ಮೌಢ್ಯ ಆಚರಣೆಗೆ ಬೆನ್ನು ಹತ್ತಿ ಅನೇಕ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿರುವವುದನ್ನ ಕಾಣಬಹುದು ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರು ಆದ ಸುಭಾಷ್ ಮಾಡ್ರಹಳ್ಳಿ ಹೇಳಿದರು. ಅವರು ಮಾನವ ಬಂಧುತ್ವ ವೇದಿಕೆ ಹಾಗೂ ಸಿ ಎಂ ಎಸ್ ಚಿಲ್ಡ್ರನ್ಸ್ ಹೋಮ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾಗರ ಪಂಚಮಿ ಅಂಗವಾಗಿ ಬಸವ ಪಂಚಮಿ ಆಚರಣೆ ಮಾಡುತ್ತ ಕಳೆದ ಹತ್ತು ವರ್ಷಗಳಿಂದಲೂ ಮೌಢ್ಯದ ವಿರುದ್ಧ ಜನ ಜಾಗೃತಿ ಮೂಡಿಸುವ ಸಲುವಾಗಿ ಹಾಲು ಹಾಗೂ ಪೌಷ್ಟಿಕಾಂಶ ಯುಕ್ತ ತಿನಿಸುಗಳನ್ನು ಪೋಲು ಮಾಡದೆ ನಮ್ಮ ನಡುವಿನ ಅಂದ ಮಕ್ಕಳು ,ಅಸಹಾಯಕರು , ಹಾಗೂ ನಿರ್ಗತಿಕರಿಗೆ ನೀಡಿದರೆ ಸಂತೃಪ್ತಿಯ ಭಾವ ಕಾಣಬಹುದು.
ದುರಂತ ನಾವು ಧಾರ್ಮಿಕ ಶ್ರದ್ಧೆ ,ನಂಬಿಕೆ ಹಾಗೂ ಆಚರಣೆ ನೆಪದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಹುತ್ತಕ್ಕೆ ಎರೆಯುವ ಮೂಲಕ ಪೋಲು ಮಾಡಲಾಗುತ್ತಿದೆ .

ಕಣ್ಣಿಗೆ ಕಾಣುವ ದೇವರೆಂದರೆ ಮಕ್ಕಳೇ ಆಗಿವೆ ಹಾಗಾಗಿ ಹುತ್ತಕ್ಕೆ ಹಾಲು ಎರೆಯುವ ಬದಲಾಗಿ ಹಾಲನ್ನು ಕುಡಿಯುವ ಹಬ್ಬವನ್ನಾಗಿ ಪರಿವರ್ತಿಸಿ ಪೌಷ್ಟಿಕ ಆಹಾರವನ್ನು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಯ ತಾಲ್ಲೂಕು ಸಂಚಾಲಕ ಆರ್ .ಸೋಮಣ್ಣ , ಕಾವಲು ಪಡೆ ತಾ ಅಧ್ಯಕ್ಷ ರಾದ ಅಬ್ದುಲ್ ಮಾಲಿಕ್ , ಮಾಧು , ರಾಮೇಗೌಡ , ಕವಿ ಮದ್ದಯ್ಯನಹುಂಡಿ ನಾಗರಾಜ್ , ಸಂಸ್ಥೆಯ ವ್ಯವಸ್ಥಾಪಕರಾದ ಸೆಲ್ವ ರಾಜ್ , ಕೆ ಎಂ ಮನಸ್ ಮಂಜುಳಾ ಹಾಗೂ ರವಿ ಹಾಗೂ ವಿದ್ಯಾರ್ಥಿ , ವಿದ್ಯಾರ್ಥಿನಿಯರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ