ಚಾಮರಾಜನಗರ:ರಾಜ್ಯ ಮಳೆ ಹಾನಿಯಿಂದಾಗಿ ವಿಪತ್ತಿನಲ್ಲಿರುವ ಸಂದರ್ಭದಲ್ಲಿ ವಿರೋಧಪಕ್ಷವಾದ ಕಾಂಗ್ರೆಸ್ ಕಾರ್ಯಕರ್ತರು ಒಂದು ಮೈಸೂರ್ ಪಾಕ್ ಗೆ ಅಲ್ಲಿಗೆ ಹೋಗಬೇಕಿತ್ತಾ ಎಂದು ಸಿದ್ಧರಾಮೋತ್ಸವ ಕುರಿತು ವ್ಯಂಗ್ಯವಾಡಿದರು.
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ ಮಳೆ ಹಾನಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಕೋಮುಗಲಭೆ ಹಾಗೂ ಮಳೆಹಾನಿಯಿಂದಾಗಿ ಸೂತಕದ ಮನೆಯಂತಿದೆ ಈ ಸಂದರ್ಭದಲ್ಲಿ ಸಿದ್ಧರಾಮೋತ್ಸವದ ಅಗತ್ಯವಿರಲಿಲ್ಲ, ನಾವು ಕೂಡ ನಮ್ಮ ಸರ್ಕಾರದ ಸಂಭ್ರಮವನ್ನು ಈ ಕಾರಣಕ್ಕೆ ಮೊಟಕುಗೊಳಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಸಿದ್ಧರಾಮೋತ್ಸವ ಮಾಡಿದರು ಅಷ್ಟೇ, ಪಕ್ಷೋತ್ಸವ ಮಾಡಿದರು ಅಷ್ಟೇ ಅವರು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಮೋದಿ ಯುಗ, ಬಿಜೆಪಿ ಯುಗ ಎಂದು ತಿಳಿಸಿದರು.