ಬೆಂಗಳೂರು: ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಅವರು ಮತ್ತೆ ಕಾಂಗ್ರೆಸ್ಸಿಗೆ ಸೇರಲು ಹೊರಟಿರುವ ಬಗ್ಗೆ ವ್ಯಂಗ್ಯವಾಡಿರುವ ಸಂಸದ ಶ್ರೀನಿವಾಸ ಪ್ರಸಾದ್ ಅವರಿಬ್ಬರು ಪರಸ್ಪರರ ಬಗ್ಗೆ ಏನು ಮಾತನಾಡಿಕೊಂಡಿದ್ದರೆನ್ನುವುದನ್ನು ನೆನಪಿಸಿಕೊಳ್ಳಲಿ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ವಿಶ್ವ ನಾಥ್ ಮತ್ತೆ ಒಂದಾಗುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ವಿಶ್ವನಾಥ್- ಮತ್ತು ಸಿದ್ದರಾಮಯ್ಯ ಅವರ ಬಗ್ಗೆ ನಾನು ಪ್ರತಿಕ್ರಿಯೆ ಕೊಡದೇ ಇರುವುದೇ ಒಳ್ಳೆಯದು. ಅವರಿಬ್ಬರು ಏನೇನು ಮಾತನಾಡಿದ್ದಾರೆ ಎಂದು ಅವರೇ ನೆನಪಿಸಿಕೊಳ್ಳಲಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಬಗ್ಗೆ ವಿಶ್ವನಾಥ್ ಏನೇನೋ ಕಟು ಶಬ್ದಗಳನ್ನು ಬಳಸಿದ್ದರು. ಇನ್ನು ವಿಶ್ವನಾಥ್ ಪ್ರಸ್ತಾಪ ಬಂದಾಗ ಸಿದ್ದರಾಮಯ್ಯ ಅವರು ಪಾದರಕ್ಷೆ ಕಳಚಿ ತೋರಿಸಿದ್ದರು. ಇದೀಗ ಮತ್ತೆ ಇಬ್ಬ ರು ಒಂದಾಗುತ್ತಾರೆ ಎಂದರೆ ನಾನೇನು ಹೇಳಲಿ ಎಂದು ಶ್ರೀ ನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.