Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ಕುರಿ- ಮೇಕೆ ಖರೀದಿ ಇನ್ನು ಆನ್‌ಲೈನ್ ನಲ್ಲಿ ಲಭ್ಯ

ಮೈಸೂರು: ಕುರಿ ಹಾಗೂ ಮೇಕೆಗಳನ್ನು ಇನ್ನು ನೀವು ಮಾರುಕಟ್ಟೆಗೆ ಹೋಗಿಯೇ ಖರೀದಿಸಬೇಕಿಲ್ಲ. ಇದಕ್ಕಾಗಿ ಆನ್‌ಲೈನ್ ಸೇವೆಗೆ ಅಣಿಗೊಳಿಸಲಾಗುತ್ತಿದ್ದು, ಮನೆಯಲ್ಲಿಯೇ ಕುಳಿತು ಸೂಕ್ತ ಮಾಹಿತಿ ಪಡೆದು ಖರೀದಿಸುವ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ಮೈಸೂರಿನಲ್ಲಿ ಜಾರಿಗೆ ಬರುತ್ತಿದೆ.

 

ಕುರಿ ಹಾಗೂ ಮೇಕೆಗಳ ಮಾರುಕಟ್ಟೆ ವ್ಯವಸ್ಥೆ ಡಿಜಿಟಲೀಕರಣಗೊಳಿಸಲಾಗಿದ್ದು, ಮೈಸೂರು ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇದು ಜನ ಬಳಕೆಗೆ ಸಿಗಲಿದೆ. ಇದಕ್ಕಾಗಿಯೇ ಇಲಾಖೆ ಹಾಗೂ ನಿಗಮದಿಂದ ತಂತ್ರಜ್ಞಾನದ ಕುರಿತು ತರಬೇತಿಯನ್ನು ಆಗಸ್ಟ್ ೧೦ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಧನ್ವಂತ್ರಿ ರಸ್ತೆಯಲ್ಲಿರುವ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ ೧೦ಕ್ಕೆ ನಡೆಯುವ ಕಾರ್ಯಾಗಾರವನ್ನು ಇಲಾಖೆ ಆಯುಕ್ತ ಡಾ.ಬಸವರಾಜೇಂದ್ರ ಉದ್ಘಾಟಿಸುವರು. ಇಲಾಖೆ ನಿರ್ದೇಶಕ ಡಾ. ಮಂಜುನಾಥ ಪಾಳೇಗಾರ್,  ಅಪರ ನಿರ್ದೇಶಕ ಡಾ.ಪ್ರಸಾದ್ ಮೂರ್ತಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪಂಪಾಪತಿ,  ಜಂಟಿ ನಿರ್ದೇಶಕರಾದ ಡಾ.ವೀರಭದ್ರಯ್ಯ, ಎನ್ ಇಎಂಎಲ್ ಸಂಸ್ಥೆಯ ಹರ್ಷ ಹಾಜರಿರುವರು. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಉಪನಿರ್ದೇಶಕರು, ಮುಖ್ಯ ಪಶು ವೈದ್ಯಾಧಿಕಾರಿಗಳು, ನಿಗಮದ ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ‌್ಯದರ್ಶಿಗಳು, ರೈತ ಉತ್ಪಾದಕ ಸಂಸ್ಥೆಯ ಕಾರ‌್ಯನಿರ್ವಾಹಕ ಅಧಿಕಾರಿಗಳು ಮತ್ತು ನಿರ್ದೇಶಕರು ಪಾಲ್ಗೊಳ್ಳುವರು ಎಂದು ನಿಗಮದ ಮೈಸೂರು ಸಹಾಯಕ ನಿರ್ದೇಶಕ ಡಾ.ಮ.ಪು.ಪೂರ್ಣಾನಂದ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ