ಬೈಲಕುಪ್ಪೆ: ಕಳ್ಳತನ ಮಾಡಿದ್ದ ಆರೋಪಿಗೆ ಪಿರಿಯಾಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯವು ೬ ತಿಂಗಳು ಕಾರಾಗೃಹ ಶಿಕ್ಷೆ ಮತ್ತು 500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಮೀಪದ ತಿರುಮಲಪುರ ಗ್ರಾಮದ ಜೈನಿ ವರ್ಗಿಸ್ ಶಿಕ್ಷೆಗೆ ಒಳಗಾದ ಆರೋಪಿ.
ಪಿರಿಯಾಪಟ್ಟಣ ತಾಲ್ಲೂಕಿನ ಚಿಕ್ಕಹೊನ್ನೂರು ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳನ್ನು ಈತ ೮ ತಿಂಗಳ ಹಿಂದೆ ಕಳವು ಮಾಡಿದ್ದ. ಪೊಲೀಸ್ ಠಾಣಾಧಿಕಾರಿ ಬಸವರಾಜ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಿವಪ್ರಕಾಶ್ ಗಾಂವ್ಕರ್ ವಾದ ಮಂಡಿಸಿದರು.





