ಸುಂಟಿಕೊಪ್ಪ: ಕೊಡಗಿನ ನಂಜರಾಯಪಟ್ಟಣದ ಯುವತಿ ನಂದಿನಿ ಅವರು ಡಿ.೧ ರಿಂದ ೫ನೇ ರವರೆಗೆ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೆಷ್ಟೋಬಾಲ್ ಮಹಿಳಾ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ನಂದಿನಿ ಅವರು ಪ್ರಸ್ತುತ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಪಿ.ಇಡಿ ವ್ಯಾಸಂಗ ಮಾಡುತ್ತಿದ್ದು ನಂದಿನಿಯ ಸಾಧನೆಯ ಬಗ್ಗೆ ಹರ್ಷವ್ಯಕ್ತಪಡಿಸಿರುವ ಗ್ರಾಮಸ್ಥರು, ಪೋಷಕರಾದ ವಾಸು ಮತ್ತು ಪುಷ್ಪಾವತಿ ದಂಪತಿಯನ್ನು ಅಭಿನಂದಿಸಿದ್ದಾರೆ.