ಸಿದ್ದಾಪುರ: ಪ್ರತಿ ಶನಿವಾರ ಮತ್ತು ಭಾನುವಾರದಂದು ಸಿದ್ದಾಪುರದಲ್ಲಿ ದೊಡ್ಡ ಸಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ ಸುತ್ತಮುತ್ತಲಿನ ತೋಟಕಾರ್ಮಿಕರು ರೈತರು ವ್ಯಾಪಾರಸ್ಥರು ಇಲ್ಲಿ ವ್ಯಾಪಾರ ವಹಿವಾಟಿಗಾಗಿ ಆಗಮಿಸುತ್ತಾರೆ .
ಮಾಲ್ದರೆ,ಚೆನ್ನಯ್ಯನಕೋಟೆ,ಪಾಲಿಬೆಟ್ಟ ಅಮ್ಮತ್ತಿ,ಇಂಜಿಲಗೆರೆ ,ಚೆಟ್ಟಳ್ಳಿ,ನೆಲ್ಯಾಹುದಿಕೇರಿ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಸ್ಥರು ಕಾರ್ಮಿಕರು ಈ ಸಂತ ಮಾರುಕಟ್ಟೆಗೆ ಬರುತ್ತಾರೆ ಆದರೆ ಇಲ್ಲಿ ಅವ್ಯವಸ್ಥೆ ಹೇಳುತ್ತಿರದು ಸಿದ್ದಾಪುರ ಗ್ರಾಮದಲ್ಲಿ ಗ್ರಾಮದ ಸುತ್ತಮುತ್ತಲಿನ ಕಸ ಮತ್ತು ತ್ಯಾಜ್ಯಗಳನ್ನು ಇಲ್ಲಿನ ಮಾರುಕಟ್ಟೆಯ ಆವರಣದಲ್ಲಿ ಶೇಖರಿಸುವುದರಿಂದ ದಿನಸಿ ,ತರಕಾರಿ ಖರೀದಿಯೊಂದಿಗೆ ರೋಗಾಣುಗಳನ್ನು ಕೊಂಡಯುವ ಸ್ಥಿತಿ ನಿರ್ಮಾಣವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು,ಗ್ರಾಹಕರು ಬರುವ ಮಾರುಕಟ್ಟೆ ಯಲ್ಲಿ ಅರ್ದಭಾಗದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಿರುವುದರಿಂದ ಜಾಗದ ಸಮಸ್ಯೆಯಿಂದಾಗಿ ಬೀದಿಬದಿಯಲ್ಲಿಯೆ ವ್ಯಾಪಾರ ವಹಿವಾಟು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಮಕಾವಸ್ಥೆಯ ರೈತಸಂತೆ :-ರೈತರು ತಾವು ಬೆಳೆದ ಹಣ್ಣು,ತರಕಾರಿ, ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಶಾಸಕರು ರೈತ ಸಂತೆಗೆ ಮಾರುಕಟ್ಟೆಯಲ್ಲೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ ಯಾದರು ಇಂದು ಅದು ಗ್ರಾಮದ ಕಸ ವಿಲೇವಾರಿಯಿಂದಾಗಿ ಸದುಪಯೋಗ ಗೊಳ್ಳದೆ ಇದೆ.
ಕಸತುಂಬುವ ಗೊಡಾನ್ ಗಳು :-ಕುರಿ ಕೋಳಿ,ಮಾಂಸಗಳ ಮಳಿಗೆಗಳಿಗೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ,ಲೈಸನ್ಸ್ ನೀಡುವ ಮೂಲಕ ವರ್ತಕರು ಸ್ವಂತ ಕಟ್ಟಡಗಳಲ್ಲೆ ವ್ಯಾಪರ ನಡೆಸುವುದರಿಂದ ಸುಮಾರು 13 ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ ಕೋಳಿ ಮತ್ತು ಕುರಿ ಮಾಂಸ ಮಳಿಗೆಗಳು ಇಂದು ತ್ಯಾಜ್ಯ ಸಂಗ್ರಹ ಗೋಡನ್ಗಳಾಗಿ ಪರಿವರ್ತನೆಗೊಂಡಿದೆ.ಇದರಿಂದಾಗಿ ಸಿದ್ದಾಪುರ ಪಟ್ಟಣದಲ್ಲಿ ಕೋಳಿ,ಕುರಿ ಮಾಂಸದ ದರವು ಗಗನಕ್ಕೆ ಏರಿದೆ.
ಸಾಂಕ್ರಾಮಿಕ ರೋಗದ ಭೀತಿ:- 50ಮೀಟರ್ ಅಂತರದಲ್ಲೆ ಸರಕಾರಿ ಪ್ರಾಥಮಿಕ ಶಾಲಾ ವಠಾರವಿದ್ದುಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿಯಿಂದಲೇ ಬರಬೇಕಾಗಿದೆ.