Mysore
15
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಸಾಹಿತ್ಯ ಸಮ್ಮೇಳನಕ್ಕೆ ಕವನ, ವಿವಿಧ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಡ್ಯ: ಸಂಕ್ರಾಂತಿ ಸಂಭ್ರಮದ ಅಂಗವಾಗಿ ಸಾಹುಕಾರ್ ಬಿ.ಎಂ.ರುದ್ರಪ್ಪ ಹಾಗೂ ಗೌರಮ್ಮ ಅವರ ಸ್ಮರಣಾರ್ಥ ಅಖಿಲ ಕರ್ನಾ ಟಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.೧೪ರಂದು ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದು, ಆಸಕ್ತರಿಂದ ಕವಿಗೋಷ್ಠಿಗೆ ಕವನಗಳನ್ನು ಹಾಗೂ ವಿವಿಧ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ, ಕನ್ನಂಬಾಡಿ ಹಾಗೂ ಕಾವೇರಿ ಪ್ರಭ ದಿನಪತ್ರಿಕೆಯವರ ಸಹಯೋಗದಲ್ಲಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ಆಸಕ್ತರು ೨೦ ಸಾಲಿನ ಎರಡು ಕವನಗಳು, ಕಿರು ಪರಿಚಯ, ಫೋಟೋ, ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಡಿ.೧೫ರೊಳಗೆ ಕಳುಹಿಸಬೇಕು. ವ್ಯಾಟ್ಸಾಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು ನಂತರ ಅಂಚೆ ಮೂಲಕ ಕಳುಹಿಸಬೇಕು.
ಆಯ್ಕೆಯಾದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಐವತ್ತು ಮಂದಿ ಕವಿಗಳಗೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಭಾಗವಹಿಸುವ ಕವಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಲಾಗುವುದು. ಇಪ್ಪತ್ತು ಉತ್ತಮ ಕವನಗಳಿಗೆ ‘ಕಾವ್ಯಶ್ರೀ’, ಇಪ್ಪತ್ತು ಮಂದಿ ಸಾಧಕರಿಗೆ ‘ಕನ್ನಡ ರತ್ನ’, ಇಪ್ಪತ್ತು ಮಂದಿ ಸಾಧಕರಿಗೆ ‘ಕಾಯಕ ಯೋಗಿ’ ಮತ್ತು ಜೀವಮಾನದ ಅತ್ಯುತ್ತಮ ಸಾಧನೆಗೆ ೧೦ ಮಂದಿಗೆ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ನೀಡಲಾಗುವುದು. ಅತ್ಯುತ್ತಮ ಸಾಹಿತ್ಯ ಸೇವೆ ಮಾಡಿದ ಸಾಧಕರನ್ನು ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗುವುದು.
ಆಸಕ್ತರು ಡಿ.೧೫ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ವ್ಯಾಟ್ಸಾಪ್ ಸಂಖ್ಯೆ: ೯೪೪೮೪ ೨೪೩೮೦ಗೆ ಸಂಪರ್ಕಿಸಬೇಕಾಗಿ ಜೀಶಂಪ ವೇದಿಕೆ ಕೋರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!