Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

ಚಾಮರಾಜನಗರ: ನಗರದ ಮುಸ್ಲಿಂ ಸಮುದಾಯದ ಸಾದಿಕ್ ಉಲ್ಲಾ ಖಾನ್ ಎಂಬ ಯುವಕ ಕಳೆದ ೫ ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಗಾಂಧೀಜಿಯ ವೇಷಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ನಗರದ ೫ನೇ ವಾರ್ಡ್ ನ ನಿವಾಸಿ ಜಬ್ಬಾರ್ ಖಾನ್ ಹಾಗೂ ಸಲ್ಮಾ ಬಾನು ಅವರ ಪುತ್ರನಾದ ಸಾದಿಕ್ ಉಲ್ಲಾ ಖಾನ್ ಬಂಜಾರಾ ಶಾಲೆಯಲ್ಲಿ ೬ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಸ್ವಯಂ ಪ್ರೇರಿತರಾಗಿ ಗಾಂಧೀಜಿಯ ವೇಷಧಾರಿಯಾಗಿರುವ ಸಾದಿಕ್ ನನ್ನು ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ವೇದಿಕೆಯಲ್ಲಿ ಸನ್ಮಾನಿಸಿದರು.

೫ ವರ್ಷಗಳಿಂದ ಬಣ್ಣ ಹಚ್ಚುವ ಯುವಕ:

ನಗರದಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವ ಮುಸ್ಲಿಂ ಸಮುದಾಯದ ಜಬ್ಬರ್ ಖಾನ್ ಕುಟುಂಬ ದೇಶಭಕ್ತಿಯ ಕುರುಹಾಗಿ ಕಳೆದ ೫ ವರ್ಷಗಳಿಂದಲೂ ಮಗನಿಗೆ ಬಣ್ಣ ಹಚ್ಚುತ್ತಾ ಬಂದಿದ್ದು ನಮ್ಮ ದೇಹದ ನರನಾಡಿಗಳಲ್ಲಿ ಈ ದೇಶದ ಅಭಿಮಾನ ತುಂಬಿಕೊಂಡಿದೆ. ಆ ಕಾರಣಕ್ಕಾಗಿಯೇ ನನ್ನ ಮಗನಿಗೆ ವಿವಿಧ ರಾಷ್ಟ್ರೀಯ ನಾಯಕರು ಹಾಗೂ ಹೋರಾಟಗಾರರ ವೇಷಧರಿಸಿ ಈಗೇ ಖುಷಿ ಪಡುತ್ತೇವೆ ಎಂದು ಜಬ್ಬಾರ್ ಖಾನ್ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ವಿವಿಧ ವೇಷಧಾರಿ:

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗಾಂಧೀಜಿಯ ವೇಷಧಾರಿಯಾಗುವ ಸಾದಿಕ್ ಕೃಷ್ಣ ಜನ್ಮಾಷ್ಟಮಿಯ ದಿನ ಕೃಷ್ಣನ ವೇಷ ಧರಿಸಿ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅದಲ್ಲದೇ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ಅಂಬೇಡ್ಕರ್ ಹಾಗೂ ಇತರೆ ರಾಷ್ಟ್ರ ನಾಯಕರ ವೇಷ ಧರಿಸಿ ಎಲ್ಲರ ಗಮನ ಸೆಳೆಯುವ ಸಾದಿಕ್ ಓದಿನಲ್ಲೂ ಮುಂದಿದ್ದು, ಹಲವಾರು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಬೇಷ್ ಎನಿಸಿಕೊಂಡಿದ್ದಾನೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ