ಚಾಮರಾಜನಗರ:ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧ ವಿಹಾರದಲ್ಲಿ ಆರ್.ಎಸ್.ಎಸ್ ಆಳ ಮತ್ತು ಅಗಲ ಪುಸ್ತಕ ಹಂಚುವುದರ ಮೂಲಕ ಸಾಮ್ರಾಟ್ ಎಂಬ ಮಗುವಿನ ಹುಟ್ಟು ಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬುದ್ಧರತ್ನ ಭಂತೇಜಿ, ಭಾರತೀಯ ಪರಿವರ್ತನಾ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸು ಹೊಂಡರಬಾಳು, ಟೌನ್ ಅಧ್ಯಕ್ಷ ಬಾಬು ರಾಮಸಮುದ್ರ, ಚಿನ್ನಸ್ವಾಮಿ, ಪೋಲೀಸ್ ಪ್ರದೀಪ್, ನಿವೃತ್ತ ಪೊಲೀಸ್ ಅಧಿಕಾರಿ ಗುರುಸಿದ್ದಯ್ಯ, ರಮೇಶ್ ನಾಯಕ್, ಮಹೇಶ್, ರಮೇಶ್, ಮಧು, ರಸಿಕ, ಕುಮಾರ್, ವೆಂಕಟೇಶ್ ನವೀನ್, ರಘು, ಉಸ್ಮಾನ್ ಹಾಗೂ ಇತರರು ಭಾಗವಹಿಸಿದ್ದರು.