ಮೈಸೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ನಡೆದ ಗಲಾಟೆಯಲ್ಲಿ ಅಮಾಯಕ ವೃದ್ಧ ಬಲಿಯಾದ ಘಟನೆ ಮೈಸೂರು ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ನಗರದ ವಿದ್ಯಾರಣ್ಯಪುರಂ ಬಳಿಯ ಸೂಯೆಜ್ ಫಾರಂ ಗೇಟ್ ಬಳಿ ವೆಂಕಟೇಶ್ ಹಾಗೂ ಆಕಾಶ್ ಎಂಬುವರು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಯುವಕರ ನಡುವೆ ನಡೆದ ಹೊಡೆದಾಟದಲ್ಲಿ ಅಗ್ರಹಾರದ ನಿವಾಸಿ ಲಿಂಗಣ್ಣ(70) ಸಾವನ್ನಪ್ಪಿದ ವೃದ್ದ ಸಾವನ್ನಪ್ಪಿದ್ದಾನೆ.
ಇಬ್ಬರು ಯುವಕರ ನಡುವಿನ ಗಲಾಟೆ ಹೊಡೆದಾಟಕ್ಕೆ ತಿರುಗಿದೆ. ಕ್ರಿಕೆಟ್ ಬ್ಯಾಟ್ ತಂದ ವೆಂಕಟೇಶ್ ಜೋರಾಗಿ ಆಕಾಶ್ ಮೇಲೆ ಬೀಸಿದ್ದಾನೆ.ಆಕಾಶ್ ತಲೆ ಬಗ್ಗಿಸಿ ತಪ್ಪಿಸಿಕೊಂಡಿದ್ದಾನೆ.
ಗುರಿ ತಪ್ಪಿದ ಬ್ಯಾಟ್ ಗಲಾಟೆ ನೋಡುತ್ತಾ ನಿಂತಿದ್ದ ವೃದ್ದ ಲಿಂಗಣ್ಣ ಮೇಲೆ ಬಿದ್ದಿದೆ.ಸ್ಥಳದಲ್ಲೇ ಕುಸಿದುಬಿದ್ದ ಲಿಂಗಣ್ಣ ರವರನ್ನ ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಲಿಂಗಣ್ಣ ಮೃತಪಟ್ಟಿದ್ದಾರೆ.
ಬ್ಯಾಟ್ ಬೀಸಿದ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಯುವಕ ತಲೆಮರಿಸಿಕೊಂಡಿದ್ದಾನೆ.