Mysore
26
overcast clouds

Social Media

ಭಾನುವಾರ, 10 ಮೇ 2026
Light
Dark

ಬೆಳಗಿನ ಉಪಹಾರದಲ್ಲಿ ಇಲಿ ಪತ್ತೆ : ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು: ಸಮಯಕ್ಕೆ ಸರಿಯಾಗಿ ಊಟ-ತಿಂಡಿ ದೊರೆಯದೆ ಇರುವ ಜೊತೆಗೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಉಣ ಬಿಡಿಸಿದ ಬೆಳಗಿನ ಉಪಹಾರದಲ್ಲಿ ಇಲಿ ಪ್ರೈ ಮಾಡಿ ಬಡಿಸಿದ್ದು, ಇದರಿಂದಾಗಿ ಕುಪಿತಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯದ ಬ್ಲಾಕ್-೨ನಲ್ಲಿ ಬುಧವಾರ ಬೆಳಿಗ್ಗೆ ಎಂದಿನಂತೆ ಬಾತ್‌ನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಕೊಡಲಾಗಿದೆ. ಕೆಲವರು ಮಾಮೂಲಿಯಂತೆ ಸವಿದರೆ, ಹಲವರಿಗೆ ಇಲಿಯ ತುಂಡುಗಳು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್‌ನ ಅಡುಗೆ ಸಿಬ್ಬಂದಿಗೆ ತೋರಿಸಿದ್ದಾರೆ. ನಂತರ ತಿಂಡಿ ಮಾಡಿದ್ದ ಪಾತ್ರೆಗಳನ್ನು ನೋಡಿದಾಗ ಇಲಿಯು ಬಿದ್ದಿರುವುದನ್ನು ಗಮನಿಸದೆ ಹೋಗಿದ್ದರಿಂದ ಸೌಟನ್ನು ಆಡಿಸಿದ್ದರಿಂದ ಈ ರೀತಿಯಾಗಿರಬಹುದೆಂದು ಹೇಳಿ ವಾಪಸ್ ತಿಂಡಿಯನ್ನು ಪಡೆದು ಬದಲಿ ವ್ಯವಸ್ಥೆ ಮಾಡಿಕೊಡುವ ಮಾತನ್ನು ಹೇಳಿದ್ದಾರೆ. ಆದರೆ, ಕ್ಯಾಂಟೀನ್ ನಡೆಸುವವರ ಹಾಗೂ ಹಾಸ್ಟೆಲ್ ನಿರ್ವಹಣೆ ಮಾಡುವವರ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳು ಗಂಗೋತ್ರಿ ಕ್ಯಾಂಪಸ್‌ನ ಪ್ರವೇಶ ದ್ವಾರದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!