Mysore
18
overcast clouds

Social Media

ಗುರುವಾರ, 01 ಜನವರಿ 2026
Light
Dark

ಅತ್ಯಾಚಾರ, ಕೊಲೆ ಆರೋಪಿ ವಿರುದ್ಧ ಶೀಘ್ರ ಚಾರ್ಜ್ ಶೀಟ್: ಗೋಪಾಲಯ್ಯ

ಮಂಡ್ಯ: ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿ ವಿರುದ್ಧ ಮುಂದಿನ ಹತ್ತು ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಳವಳ್ಳಿಯ ಮೈಸೂರು ರಸ್ತೆಯಲ್ಲಿರುವ ಮೃತ ಬಾಲಕಿಯ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಅತ್ಯಾಚಾರಿ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತದೆ. ಈ ಪ್ರಕರಣವನ್ನು ಶೀಘ್ರಗತಿ ನ್ಯಾಾಂಲುಂಕ್ಕೆ ವಹಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಪ್ರಕರಣ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರೊಂದಿಗೆ ವಾತುಕತೆ ನಡೆಸಲಾಗಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲಾಗುವುದು. ಮುಂದಿನ ದಿನಗಳಲ್ಲಿ ಬಾಲಕಿ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇವೆ. ಆದರೆ ಎಷ್ಟೇ ಪರಿಹಾರ ಕೊಟ್ಟರೂ ಬಾಲಕಿಯನ್ನು ವಾಪಸ್ ತರಲು ಆಗುವುದಿಲ್ಲ. ನಮಗೂ ಅತೀವ ಆ ದುಃಖ ಇದೆ ಎಂದು ಹೇಳಿದರು.
ಹಾಸನ ಹಾಗೂ ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದ ಕಾರಣದಿಂದ ಇಲ್ಲಿಗೆ ಬರುವುದು ತಡವಾಯಿತು. ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ವಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!