ಮಂಡ್ಯ : ಸತತವಾಗಿ ಸುರಿದ ಮಳೆಯಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದ್ದು ನೀರಿನ ಮಟ್ಟ ಹೆಚ್ಚಾಗಿದೆ.
:124.38, ಒಳಹರಿವು : 68586, ಹೊರಹರಿವು :80161 ಹೊರಹರಿವು ಇದ್ದು ನೀರು ಹೆಚ್ಚಾಗುತ್ತಿರುವುದರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ದೋಣಿ ವಿಹಾರವು ಸಂಪೂರ್ಣ ಮುಚ್ಚಲಾಗಿದೆ.
ಈ ಹಿಂದೆಯೂ ಕೂಡ ಕಾವೇರಿ ನದಿಯು ಉಕ್ಕಿ ಹರಿಯುತ್ತಿದ್ದ ಪರಿಣಾಮ, ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ನಾಳೆ ಜುಲೈ 11 ಮತ್ತು 12 ರವರೆಗೆ ಪಕ್ಷಿಧಾಮಕ್ಕೆ ತಾತ್ಕಾಲಿಕವಾಗಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಇದೀಗ ಹೆಚ್ಚು ನೀರು ಹರಿದು ಹೋಗುತ್ತಿರುವ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಪಕ್ಷಿಧಾಮಕ್ಕೆ ವಿಹಾರವನ್ನು ನಿರ್ಬಂಧ ಮಾಡಲಾಗಿದೆ.