ಮೈಸೂರು : ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಮೈಸೂರು ನಗರದ ವತಿಯಿಂದ” ರಕ್ಷಾಬಂಧನ” ಕಾರ್ಯಕ್ರಮವನ್ನು ಕುರುಬರಹಳ್ಳಿ ಪೋಲಿಸ್ ಕವಾಯತು ಮೈದಾನದಲ್ಲಿ ಪೋಲಿಸ್ ಸ್ನೇಹ ಯಾತ್ರ ಎಂಬ ಕಾರ್ಯಕ್ರಮ ಆಯೋಜಿಸಿದ ಹೆಚ್ಚಿನ ರಕ್ಷಣೆಯನ್ನು ಕೊಡುವ K S R P ತಂಡದೊಂದಿಗೆ ಸ್ನೇಹದ ಬಾಂಧವ್ಯ ಹಾಗೂ ಆತ್ಮಸ್ಥೈರ್ಯವನ್ನು ತುಂಬಲು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ K S R P ರಕ್ಷಣಾ ಪಡೆ ಅವರಿಗೆ ರಕ್ಷೆ ಕಟ್ಟುವ ಮೂಲಕ “ರಕ್ಷಾಬಂಧನ ” ಆಚರಿಸಲಾಯಿತು.
ಪೋಲಿಸ್ ಸ್ನೇಹ ಯಾತ್ರ ಎಂಬ ಕಾರ್ಯಕ್ರಮವು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ
ಮೈಸೂರಿನ ಎಲ್ಲಾ ಪೊಲೀಸ್ ಠಾಣೆಗೂ ಕ್ಷೇತ್ರವಾರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳಿ ಆಚರಿಸಲಾಯಿತು. ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಆನಂತರ K S R P ರಕ್ಷಣಾ ಪಡೆ ಅವರಿಗೆ ಹಣೆಗೆ ತಿಲಕವಿಟ್ಟು ,ರಕ್ಷೆ ಕಟ್ಟಿ ಸಿಹಿ ತಿನಿಸಿದರು ಅನಂತರ ದೇಶ ಸೇವೆಗಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಿದ ಪ್ರಮುಖ ಅಧಿಕಾರಿಗಳಿಗೆ
ಸನ್ಮಾನಿಸಲಾಯಿತು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್ ಮಾತನಾಡಿ
ಅಣ್ಣ ತಂಗಿಯರ ಹಬ್ಬ ಎಂದರೆ ಅದು ರಾಖಿ ಹಬ್ಬ. ರಾಖಿಯನ್ನು ಕಟ್ಟಿದ ಸಹೋದರಿಯರಿಗೆ ಅಣ್ಣಂದಿರು ಸದಾ ರಕ್ಷಣೆ ನೀಡುತ್ತಾ ಮಹಿಳೆಯರನ್ನು ಸದಾ ಗೌರವದಿಂದ ಕಾಣುವಂತೆ ಆಚರಿಸುವ ಹಬ್ಬವಾಗಿದೆ. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಗಳಿಗೂ ವಿಶೇಷ ಹಿನ್ನೆಲೆ ಹಾಗೂ ಅರ್ಥಪೂರ್ಣ ಬಾಂಧವ್ಯ ಇದ್ದೆ ಇರುತ್ತದೆ. ಇದೊಂದು ಸಹೋದರತೆಯ ಬಗ್ಗೆ ಸಂದೇಶ ಸಾರುವ ಹಬ್ಬ. ಆದ್ದರಿಂದ ಅಣ್ಣ ತಮ್ಮಂದಿರ ಸಮಾನವಾದ ಹಾಗೂ ಸದಾ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ k S R P,ಪೊಲೀಸ್, ಅಗ್ನಿಶಾಮಕ, ಹೋಮಗಾರ್ಡ್ಸ ಕಾರ್ಯದಲ್ಲಿರುವ ಸಹೋದರರಿಗೆ ಬಿಜೆಪಿ ಮಹಿಳಾ ಮೋರ್ಚಾ ರಾಖಿ ಕಟ್ಟಿ ಹಬದಬವನ್ನು ಆಚರಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್ ,ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್ ,
ನಗರ ಪಾಲಿಕಾ ಸದಸ್ಯೆ ಲಕ್ಷ್ಮೀ ಕಿರಣ್ ಗೌಡ ,ಪ್ರಮೀಳಾ ಭರತ್ ,ಮಾಜಿ ನಗರ ಪಾಲಿಕಾ ಸದಸ್ಯೆ ಆಶಾ ಲಕ್ಷ್ಮಿನಾರಾಯಣ್ ,ಚಾಮರಾಜ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ ,ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಮತಾ ಚಂದ್ರಶೇಖರ್ ,ಚಾಮುಂಡೇಶ್ವರಿ ಕ್ಷೇತ್ರದ ಗೀತಾ ಮಹೇಶ್ ,ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷೆ ಜ್ಯೋತಿ ರವಿಕುಮಾರ್ ,ಹಾಗೂ ಇನ್ನಿತರರು ಹಾಜರಿದ್ದರು